ಸುಮಾರು 5 ಎಕ್ರೆ ವಿಸ್ತೀರ್ಣವುಳ್ಳ ಹಡೀಲು ಜಮೀನಿನಲ್ಲಿ ನಾಟಿಯಂತ್ರದ ಮೂಲಕ ಭತ್ತದ ನಾಟಿ ಕಾರ್ಯಕ್ರಮ ಮಾಡುವ ಕಾರ್ಯ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಕೊಯಿಲಗುತ್ತು ಎಂಬಲ್ಲಿ ರಾಘವೇಂದ್ರರಾವ್ ಜಮೀನಿನಲ್ಲಿ ನಡೆಯಿತು. 4 ವರ್ಷಗಳಿಂದ ಕೃಷಿ ಕೂಲಿ ಕಾರ್ಮಿಕದ ಕೊರತೆಯಿಂದ ಬೇಸಾಯ ಮಾಡದೆ ಕೃಷಿಭೂಮಿ ಹಡೀಲು ಭೂಮಿಯಾಗಿತ್ತು. ಈ ವರ್ಷ ಕೃಷಿ ಇಲಾಖೆ ಸಹಾಯಧನದಲ್ಲಿ ಎಂಒ4 ಅಧಿಕ ಇಳುವರಿಯ ತಳಿಬಿತ್ತನೆ ಬೀಜ, ಕೃಷಿ ಸುಣ್ಣ ಹಾಗೂ ಸಾವಯವ ಗೊಬ್ಬರವನ್ನು ವಿತರಿಸಲಾಗಿದೆ. ಬೆಳ್ತಂಗಡಿಯ ನಡ ಗ್ರಾಮದ ಪ್ರಗತಿಪರ ರೈತ ಪ್ರಭಾಕರ ಮಯ್ಯ ಈ ಸಂದರ್ಭ ಆಗಮಿಸಿ ಅನುಭವಗಳನ್ನು ಹಂಚಿಕೊಂಡರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕ ಕೆ. ನಾರಾಯಣ ಶೆಟ್ಟಿ ತಾಂತ್ರಿಕ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ ಮೇಲುಗೊಬ್ಬರಗಳ ಬಳಕೆ, ಭತ್ತದ ಬೆಳೆಯಲ್ಲಿ ಸಸ್ಯ ಸಂರಕ್ಷಣೆ ಕುರಿತ ಮಾಹಿತಿ ನೀಡಿದರು. ಸ್ಥಳೀಯ ರೈತರಾದ ಹರ್ಷೇಂದ್ರ ಹೆಗ್ಡೆ ಮತ್ತಿತರರು ಈ ವೇಳೆ ಪೂರಕ ಮಾಹಿತಿಗಳನ್ನು ಪಡೆದುಕೊಂಡರು.
Be the first to comment on "ಹಡೀಲು ಜಮೀನಿನಲ್ಲಿ ಹಸಿರು, ಕೃಷಿ ಇಲಾಖೆ ಸಹಕಾರದಿಂದ ಬೇಸಾಯ"