ಇದು ಪುತ್ತೂರಿನ ಸಂಪ್ಯದಲ್ಲಿರುವ ಪ್ರದೇಶ. ಹಲವಾರು ವರ್ಷಗಳಿಂದ ಅಲ್ಲಿ ಖಾಲಿ ಬಿದ್ದಿರುವ ಗದ್ದೆ ಜಾಗ. ಗಿಡಗಂಟಿಗಳೊಂದಿಗೆ ಸಮೃದ್ಧವಾಗಿದ್ದ ಹಡೀಲು ಭೂಮಿಯನ್ನು ಸಮತಟ್ಟುಗೊಳಿಸಿ, ನೇಜಿ ನೆಡಲು ಅಣಿಯಾಗಿಸುವ ಕಾರ್ಯವನ್ನು ಇಂದು ಪುತ್ತೂರು ರೋಟರಿ ಸೆಂಟ್ರಲ್ ತಂಡ ನಡೆಸಿತು. ಸದಾ ಕಚೇರಿ ಜಂಜಡಗಳಲ್ಲಿ ಮುಳುಗಿರುವ ಸದಸ್ಯರು ಗದ್ದೆಗಿಳಿದು ಸುರಿಯುವ ಮಳೆಯನ್ನು ಲೆಕ್ಕಿಸದೆ ಹಾರೆ ಹಿಡಿದರು. ಇವರಲ್ಲಿ ಬಂಟ್ವಾಳ ಭೂಮಿ ಶಾಖೆಯ ಉಪತಹಸೀಲ್ದಾರ್ ಶ್ರೀಧರ್ ಅವರೂ ಲವಲವಿಕೆಯಿಂದ ತೊಡಗಿಸಿಕೊಂಡರು. ಲೇಖನಿ ಹಿಡಿದು, ಫೈಲುಗಳ ನಡುವೆ ಮುಳುಗಿರುವ ಶ್ರೀಧರ್, ಇಂದು ಹಾರೆ ಹಿಡಿದು ಗದ್ದೆಯಲ್ಲಿರುವ ಕಳೆ ಕೀಳುವ ಕಾರ್ಯವನ್ನು ಇತರ ರೋಟರಿ ಸದಸ್ಯರೊಂದಿಗೆ ನಡೆಸಿದರು.ಬೆಳಗಿನಿಂದ ಸಂಜೆವರೆಗಿನ ಅವಧಿಯನ್ನು ಗದ್ದೆಯಲ್ಲಿ ಕಳೆದ ಶ್ರೀಧರ್ ಮತ್ತು ಇತರ ರೋಟರಿ ಸದಸ್ಯರು ಮಾದರಿ ಕಾರ್ಯವನ್ನು ನಡೆಸಿದರು. ಹಾಡುಗಾರರು, ಯಕ್ಷಗಾನ ವೇಷಧಾರಿಗಳೂ ಆಗಿರುವ ಶ್ರೀಧರ್ ಅವರಿಗೆ ಕೃಷಿ ಕಾರ್ಯದ ಕುರಿತು ಆಸಕ್ತಿ. ಸಂಪ್ಯದಲ್ಲಿ 20 ವರ್ಷಗಳಿಂದ ಹಡೀಲು ಬಿದ್ದ ಗದ್ದೆ ಇದು. ಟ್ರಾಕ್ಟರ್ ತೆಗೆದುಕೊಂಡು ಹೋಗಿ. ಗದ್ದೆಯನ್ನು ಸಮತಟ್ಟುಗೊಳಿಸಿ ಗೊಬ್ಬರ ಹಾಕಿ, ನೇಜಿ ನೆಡಲು ತಯಾರು ಮಾಡಿದ್ದೇವೆ. ನಾವೆಲ್ಲಾ ಪುತ್ತೂರು ರೋಟರಿ ಸೆಂಟ್ರಲ್ ತಂಡದ ಸದಸ್ಯರು ಒಟ್ಟಾಗಿ ಇದನ್ನು ನಡೆಸಿದ್ದೇವೆ ಎಂದು ಹೇಳಿದರು ಶ್ರೀಧರ್.
Be the first to comment on "ಹಡೀಲು ಬಿದ್ದ ಗದ್ದೆ ನಾಟಿ, ಕಚೇರಿಯಿಂದ ಗದ್ದೆಗಿಳಿದ ಉಪತಹಸೀಲ್ದಾರ್"