ಬುಧವಾರ ಬಂಟ್ವಾಳ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ಮಂಜೂರಾದ ಒಟ್ಟು 30 ಕೋ.ರೂ.ಅನುದಾನದಲ್ಲಿ ಮೂರು ರಸ್ತೆ ಕಾಮಗಾರಿಗಳಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜತೆ ಸಂಸದ ನಳಿನ್‌ಕುಮಾರ್ ಕಟೀಲು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಗೋಳ್ತಮಜಲು-ಮಂಚಿಕಟ್ಟೆ-ನೀರಬೈಲು-ಕೇಶವನಗರ-ಅಮ್ಮೂರು ರಸ್ತೆ 14.33 ಕೋ.ರೂ, ಕೊಳ್ನಾಡು-ಬೊಲ್ಪಾದೆ-ಮಾದರಮೂಲೆ ರಸ್ತೆಗೆ 9.03 ಕೋ.ರೂ. ಹಾಗೂ ಕನ್ಯಾನ- ನೆಕ್ಕರೆಕಾಡು- ಬಾಳೆಕೋಡಿ- ಅಕ್ಕರೆಕೋಡಿ- ಬೇರಿಪದವು ರಸ್ತೆಗೆ 6.67 ಕೋ.ರೂ.ಗಳಲ್ಲಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿ.ಪಂ.ಸದಸ್ಯರಾದ ತುಂಗಪ್ಪ ಬಂಗೇರ, ಮಂಜುಳಾ ಮಾಧವ ಮಾವೆ, ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯ ಮಹಾಬಲ ಆಳ್ವ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟ್ವಾಳ ಎಪಿಎಂಸಿ ಅಧ್ಯಕ್ಷ ನೇಮಿರಾಜ ರೈ, ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಸಂದೇಶ ಶೆಟ್ಟಿ, ವಜ್ರನಾಥ ಕಲ್ಲಡ್ಕ, ನಾರಾಯಣ ಕುಲಾಲ್, ಮೋನಪ್ಪ ದೇವಸ್ಯ, ಮುಸ್ತಫಾ ಕೆ.ಎಸ್, ಗಣೇಶ್ ರೈ ಮಾಣಿ, ಉಪಸ್ಥಿತರಿದ್ದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಮಂಜೂರಾದ 30 ಕೋಟಿ ರೂ ಅನುದಾನ ರಸ್ತೆ ಕಾಮಗಾರಿಗೆ ಚಾಲನೆ"