ಬಂಟ್ವಾಳ ತಾಲೂಕು ಸಿದ್ದಕಟ್ಟೆ ರಿಕ್ಷಾ ಚಾಲಕ-ಮಾಲಕರ ಸಂಘ(ಇಂಟಕ್) ಇದರ ವತಿಯಿಂದ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಅವರ 3 ಲಕ್ಷ ರೂ. ಅನುದಾನದಿಂದ ನಿರ್ಮಿಸಲಾಗಿರುವ ಪೂಂಜಾಶ್ರೀ ಮತ್ತು ಕುಂಭ ಕಂಠಿಣಿ ರಿಕ್ಷಾ ನಿಲ್ದಾಣ ಇದರ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜ ಅವರು ನೂತನ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿದರು. ಬಳಿಕ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ಎಸ್. ಮಹಮ್ಮದ್, ತಾ.ಪಂ.ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ಇಂಟಕ್ ಜಿಲ್ಲಾ ಪ್ರ.ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ ಬೊಂಡಾಲ, ಸಂಗಬೆಟ್ಟು ವಲಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿಗಾರ್, ಗ್ರಾ.ಪಂ. ಮಾಜಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಡಾ. ಪ್ರಭಾಚಂದ್ರ ಜೈನ್, ರಿಕ್ಷಾ ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ಪ್ರಮುಖರಾದ ಗೋಪಾಲ ಬಂಗೇರ, ಜಗದೀಶ ಕೊಯಿಲ, ಪೂಂಜ ಶ್ರೀ ಮತ್ತು ಕುಂಭಕಂಠಿಣಿ ಸಂಘದ ಅಧ್ಯಕ್ಷರಾದ ಕೇಶವ ಶೆಟ್ಟಿ ಮತ್ತು ಸಂಜೀವ ನಾಯಕ್, ಕಾರ್ಯದರ್ಶಿಗಳಾದ ಸುಂದರ ಉಪ್ಪಿರ, ಅರುಣ್ ಕುಮಾರ್, ಅಶೋಕ್ ಆಚಾರ್ಯ, ಶಿವಾನಂದ ರೈ, ಸುಂದ್ರ ಶೆಟ್ಟಿ, ಜಯಕರ ಶೆಟ್ಟಿ, ಜಲಜಾ, ಸುಶೀಲಾ, ಭುಜಬಲಿ ಕಂಬಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಮಾನಾಥ ರೈ ಹಾಗೂ ಐವಾನ್ ಡಿಸೊಜ ಅವರನ್ನು ಸನ್ಮಾನಿಸಲಾಯಿತು. ಶಶಿಧರ ಶೆಣೈ ಅವರು ಸ್ವಾಗತಿಸಿದರು. ನವೀನ್ ಪೂಜಾರಿ ಪ್ರಸ್ತಾವಿಸಿದರು. ಸಂತೋಷ್ ಪೂಜಾರಿ ವಂದಿಸಿದರು. ಪುರುಷೋತ್ತಮ ಕೊಯ್ಲ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಿದ್ಧಕಟ್ಟೆ: ಇಂಟಕ್ ವತಿಯಿಂದ ನಿರ್ಮಿಸಲಾದ ಆಟೊ ನಿಲ್ದಾಣ ಉದ್ಘಾಟನೆ"