ಸದಸ್ಯರ ನೆರವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ದ.ಕ.ಜಿಲ್ಲಾ ಘಟಕ ಬದ್ಧವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನ, ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್ ಅವರ ನಿರ್ದೇಶನದೊಂದಿಗೆ ಜಿಲ್ಲೆಯಲ್ಲಿ ಯೋಜನೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜು. 9ರ ಬಳಿಕ ಜಿಲ್ಲಾ ಕಚೇರಿಯು ಮಂಗಳೂರಿನಿಂದ ಬಂಟ್ವಾಳದಲ್ಲಿ ನಿರ್ಮಿಸಲಾದ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ. ಉಪಸ್ಥಿತರಿದ್ದರು
ಉಳಿತಾಯ ಮೊತ್ತ 136 ಕೋಟಿ ರೂ: 2019-20ನೇ ಸಾಲಿನ ವರ್ಷಾಂತ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ದ.ಕ.ಜಿಲ್ಲಾ ವ್ಯಾಪ್ತಿಯಲ್ಲಿ 2806 ಹೊಸ ಸಂಘಗಳು ಸೇರಿದಂತೆ ಒಟ್ಟು 22,074 ಸಂಘಗಳಿದ್ದು, ಒಟ್ಟು 950 ಕೋ.ರೂ.ಗಳ ಸಾಲದ ವ್ಯವಹಾರ ನಡೆಸಲಾಗಿದೆ. ಕಳೆದ ಸಾಲಿನಲ್ಲಿ ಸದಸ್ಯರ ಉಳಿತಾಯ ಮೊತ್ತ 136 ಕೋ.ರೂ.ಆಗಿದ್ದು, ಈ ಸಾಲಿನಲ್ಲಿ 768 ಕೋ.ರೂ.ಗಳ ಸಾಲ ವಿತರಣೆಯ ಗುರಿ ಹೊಂದಿದ್ದೇವೆ. ವರದಿ ವರ್ಷದಲ್ಲಿ 461 ಕೃಷಿ ತರಬೇತಿ, 76 ಕೃಷಿ ಅಧ್ಯಯನ ಪ್ರವಾಸಗಳನ್ನೂ ನಡೆಸಲಾಗಿದೆ. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಒಟ್ಟು 20.74 ಕೋ.ರೂ.ಸಂಗ್ರಹಿಸಲಾಗಿದ್ದು, 16.70 ಕೋ.ರೂ. ಕ್ಲೈಮ್ ವಿತರಿಸಲಾಗಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 112 ಕಾಮಗಾರಿಗಳಿಗೆ 91.3 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.
Be the first to comment on "ಸದಸ್ಯರ ನೆರವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಲವು ಕಾರ್ಯಕ್ರಮ"