ಬೆಂಗಳೂರು 994, ಬಳ್ಳಾರಿ 97, ದಕ್ಷಿಣ ಕನ್ನಡ 97, ಕಲಬುರ್ಗಿ 72, ತುಮಕೂರು 57.. ಇದು ಕರ್ನಾಟಕದಲ್ಲಿ ಇಂದು ಹೊಸದಾಗಿ ಕೊರೊನಾ ಸೋಂಕಿತರು ಸೇರ್ಪಡೆಯಾದ ಸಂಖ್ಯೆಗಳು. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರು 7173 ಆಗಿದ್ದು, ಅವರಲ್ಲಿ 6297 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 105 ಮಂದಿ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ಒಟ್ಟು ಸೋಂಕಿತರು 1081 ಇದ್ದರೆ, 552 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ 34 ಮಂದಿ ಸಾವನ್ನಪ್ಪಿದ್ದಾರೆ. ಅದರ ನಂತರದ ಸ್ಥಾನ ಇರುವುದು ದಕ್ಷಿಣ ಕನ್ನಡ ಜಿಲ್ಲೆಗೆ.
ಇಂದು ಒಟ್ಟು 21 ಮಂದಿ ರಾಜ್ಯದ ವಿವಿಧೆಡೆ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಹೀಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 293. ಒಟ್ಟು 471 ಮಂದಿ ಸೋಂಕಿನಿಂದ ಗುಣಮುಖರಾಗಿ ಇಂದು ಬಿಡುಗಡೆ ಹೊಂದಿದ್ದಾರೆ. ಬಿಡುಗಡೆ ಹೊಂದಿದವರ ಸಂಖ್ಯೆ ಒಟ್ಟು 8805. ಇಂದು ಸೇರ್ಪಡೆಯಾದ 1694 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 10608 ಮಂದಿ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ ಒಟ್ಟು ಸೋಂಕಿತರು 19710, ಚಿಕಿತ್ಸೆ ಪಡೆಯುತ್ತಿರುವವರು 10608.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 97 ಮಂದಿಗೆ ಕೊರೊನಾ ಸೋಂಕು ತಗಲಿದ್ದು, ಈ ಪೈಕಿ 3 ಸೌದಿ, ದುಬಾಯಿನಿಂದ ಬಂದವರು. 28 ಐಎಲ್ ಐ, 25 ಪ್ರಾಥಮಿಕ ಸಂಪರ್ಕದವರಾಗಿದ್ದರೆ, ಉಳಿದವರಿಗೆ ಸೋಂಕು ಹೇಗೆ ಬಂತು ಎಂಬುದು ಇನ್ನೂ ಗೊತ್ತಾಗಿಲ್ಲ. ಇಂದು 26 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 3 ಮಂದಿ ಐಸಿಯುನಿಂದ ವಾರ್ಡ್ ಗೆ ಸ್ಥಳಾಂತರಗೊಂಡಿದ್ದಾರೆ. 5 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಡಿಕೇರಿ ಮೂಲಕ 47 ವರ್ಷದ ಪುರುಷನೋರ್ವ ಚಿಕಿತ್ಸೆಗೆ ಸ್ಪಂದಿಸದೆ ಇಂದು ಸಾವನ್ನಪ್ಪಿದ್ದಾರೆ.
ಇಂದು ಎಷ್ಟು ಪರೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದೊರಕಿದ ರಿಪೋರ್ಟುಗಳು 425. ಅವುಗಳಲ್ಲಿ 97 ಪಾಸಿಟಿವ್, 328 ನೆಗೆಟಿವ್. ಇನ್ನೂ 427 ಮಂದಿಯ ರಿಪೋರ್ಟ್ ಬರಲು ಬಾಕಿ ಇದೆ. ಒಟ್ಟು 280 ಮಂದಿಯ ಸ್ಯಾಂಪಲ್ ಗಳನ್ನು ಇಂದು ಲ್ಯಾಬ್ ಗೆ ಕಳಿಸಲಾಗಿದೆ.
ಒಟ್ಟು 14,710 ಮಂದಿಯ ಗಂಟಲು ದ್ರವ ಮಾದರಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಗ್ರಹಿಸಲಾಗಿದ್ದು, ಅವುಗಳ ಪೈಕಿ 14,428 ಮಂದಿಯ ರಿಪೋರ್ಟ್ ಬಂದಿದೆ. ಇವುಗಳ ಪೈಕಿ 1020 ಮಂದಿ ಪಾಸಿಟಿವ್ ಎಂದು ದೃಢಪಟ್ಟಿದ್ದು, ಅವುಗಳ ಪೈಕಿ 10 ಹೊರಜಿಲ್ಲೆ, ರಾಜ್ಯದವರು. ಇದೀಗ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 498. ಮೃತಪಟ್ಟವರು 19. ಬಿಡುಗಡೆ ಹೊಂದಿದವರು 503.
Be the first to comment on "ಕರ್ನಾಟಕ: 20000 ಸಂಖ್ಯೆಯ ಕದ ತಟ್ಟಿದ ಕೊರೊನಾ ವೈರಸ್, 10 ಸಾವಿರ ದಾಟಿದ ಸಕ್ರಿಯ ಪ್ರಕರಣಗಳ ಸಂಖ್ಯೆ"