ಬೆಳಗ್ಗೆ ಎದ್ದ ಕೂಡಲೇ ಬಿಸಿನೀರು ಕುಡಿದರೆ ಏನುಪಯೋಗ ಎನ್ನುವುದನ್ನು ವೈದ್ಯ ಡಾ. ಎ.ಜಿ.ರವಿಶಂಕರ್ ವಿವರಿಸುತ್ತಾರೆ.
ಆಭ್ಯಂತರ ಉಪಯೋಗಗಳು
- ಬೆಳಗ್ಗೆ ಆಹಾರದ ಮೊದಲು ಬಿಸಿನೀರು ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
- ಬೆಳಗ್ಗೆ ಆಹಾರದ ಮೊದಲು ಸಾಧಾರಣ 1 ಲೀಟರಿನಷ್ಟು ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಸೊಂಟ ನೋವನ್ನು ತಡೆಕಟ್ಟ ಬಹುದು.
- ಬಿಸಿನೀರು ಶಾರೀರಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ
- ಬಿಸಿನೀರು ಕುಡಿಯುವುದರಿಂದ ಗಂಟಲು ಮತ್ತು ಎದೆಯಲ್ಲಿ ಗಟ್ಟಿಯಾಗಿರುವ ಕಪ ಕರಗುತ್ತದೆ.
- ಎದೆ ಉರಿ, ಹುಳಿತೇಗು ಇತ್ಯಾದಿ ಲಕ್ಷಣಗಳು ಇದ್ದಾಗ ಅವಾಗಾವಾಗ ಯಥೇಷ್ಟವಾಗಿ ಬಿಸಿನೀರನ್ನು ಕುಡಿಯಬೇಕು.
- ನಿಯಮಿತವಾಗಿ ಬಿಸಿನೀರನ್ನು ಕುಡಿಯುವುದರಿಂದ ಕರುಳಿನ ಕ್ರಿಮಿಯ ಬಾಧೆ ಕಡಿಮೆಯಾಗುತ್ತದೆ.
- ಬಿಸಿನೀರು ದೇಹದಲ್ಲಿ ರಕ್ತಸಂಚಾರವನ್ನು ಉತ್ತೇಜಿಸುವ ಮೂಲಕ ಅವಯವಗಳಿಗೆ ಸೂಕ್ತ ಪೋಷಣೆ ದೊರಕಲು ಸಹಕರಿಸುತ್ತದೆ.
- ಬಿಸಿನೀರು ಅಜೀರ್ಣವನ್ನು ಹೋಗಲಾಡಿಸಿ ಬಾಯಿರುಚಿಯನ್ನು ಹೆಚ್ಚಿಸುತ್ತದೆ.
- ಬಿಸಿನೀರನ್ನು ಯಥೇಷ್ಟವಾಗಿ ಕುಡಿಯುವುದರಿಂದ ಶರೀರದ ಅನಾವಶ್ಯಕ ಕೊಬ್ಬು ನಿವಾರಣೆಯಾಗುತ್ತದೆ.
- ಬಿಸಿನೀರು ಶರೀರದ ಕಲ್ಮಶವನ್ನು ಬೆವರು ಹಾಗು ಮೂತ್ರದ ಮೂಲಕ ದೇಹದಿಂದ ಹೊರ ಹಾಕುತ್ತದೆ.
Be the first to comment on "ಬೆಳಗ್ಗೆ ಬಿಸಿನೀರು ಕುಡಿದರೆ ಯಾಕೆ ಒಳ್ಳೆಯದು ಗೊತ್ತಾ?"