ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆಸರುಮಯವಾಗಿರುವ ಬಿ.ಸಿ.ರೋಡ್ – ಜಕ್ರಿಬೆಟ್ಟು ಹೆದ್ದಾರಿಯಲ್ಲಿ ಮುಂದಿನ 20 ದಿನಗಳ ಕಾಲ ಸಂಚಾರ ನಿಷೇಧಕ್ಕೆ ಆದೇಶ ನೀಡುವಂತೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ದ.ಕ.ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.
ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಇ ಜಿ.ಎನ್.ಹೆಗ್ಡೆ ಹಾಗೂ ಎಇಇ ಎಚ್.ಪಿ.ರಮೇಶ್ ನಿಯೋಗ ಹೆದ್ದಾರಿ ಪರಿಶೀಲನೆ ನಡೆಸಿದ್ದು, ಒಂದೆರಡು ದಿನಗಳಲ್ಲಿ ಹೆದ್ದಾರಿಯ ಒಂದುಯ ಬದಿ 7 ಮೀ. ಕಾಂಕ್ರೀಟ್ ಕಾಮಗಾರಿ ಪೂರ್ಣಗೊಳ್ಳಲಿದ್ದು, ಕ್ಯೂರಿಂಗ್ಗಾಗಿ 20 ದಿನಗಳ ಸಮಯಾವಕಾಶ ಬೇಕಿರುವುದರಿಂದ ಸಂಚಾರ ನಿಷೇಧಕ್ಕೆ ಮನವಿ ಮಾಡಿದೆ.
ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಬಿ.ಸಿ.ರೋಡುನಿಂದ ಬೆಳ್ತಂಗಡಿಗೆ ಸಾಗುವ ಘನ ವಾಹನಗಳು ಬಿ.ಸಿ.ರೋಡು-ಉಪ್ಪಿನಂಗಡಿ-ಗುರುವಾಯನಕರೆ ಹೆದ್ದಾರಿಯಲ್ಲಿ ಸಂಚರಿಸಬೇಕು. ಲಘು ವಾಹನಗಳು ಬಂಟ್ವಾಳ ಪೇಟೆಯ ಮೂಲಕ ಸಾಗುವುದಕ್ಕೆ ಕ್ರಮಕೈಗೊಳ್ಳಲು ಎಸ್ಪಿಗೆ ಸೂಚಿಸಲು ಪತ್ರದಲಲ್ಲಿ ತಿಳಿಸಲಾಗಿದೆ. ಎಂಆರ್ಪಿಎಲ್ ಪೈಪುಲೈನ್ ಕಾಮಗಾರಿಯನ್ನು ಕೂಡ ವೇಗವಾಗಿ ನಡೆಸುವಂತೆ ಅಧಿಕಾರಿಗಳು ಸೂಚಿಸಿದ್ದು, ಜತೆಗೆ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಸೂಚಿಸಿದ್ದಾರೆ. ರಾ.ಹೆ.ಇಲಾಖೆಯ ಜೆಇ ಕೇಶವಮೂರ್ತಿ, ಎಇ ಕೀರ್ತಿ ಅಮೀನ್, ಗುತ್ತಿಗೆಯ ಸಂಸ್ಥೆಯ ಶರಣ್ ಗೌಡ, ದಾಮೋದರ್ ಎಂ.ಕೆ. ಜತೆಗಿದ್ದರು.
Be the first to comment on "ಬಂಟ್ವಾಳ ಕೆಸರುಮಯ ಹೆದ್ದಾರಿಯಲ್ಲಿ ಸಂಚಾರ ನಿಷೇಧ: ರಾ.ಹೆ.ಯಿಂದ ಪತ್ರ"