ನಿಮ್ಮ ಧ್ವನಿ

ಸಂಬಂಧಪಟ್ಟವರ ಗಮನಕ್ಕೆ: ಪಾಣೆಮಂಗಳೂರು-ನಂದಾವರ ಸಂಪರ್ಕ ರಸ್ತೆ ಪಕ್ಕದಲ್ಲೇ ಕಸ ಹೀಗೆ ಎಸೆದಿದ್ದಾರೆ ನೋಡಿ..

  • FOR MORE NEWS JOIN THIS GROUP

https://chat.whatsapp.com/H05sbl2dspf0hI0r3fHVTe

ಜಾಹೀರಾತು

ಪಾಣೆಮಂಗಳೂರಿನಿಂದ ನಂದಾವರಕ್ಕೆ ತೆರಳುವ ರಸ್ತೆ ಪಕ್ಕ ಕಸ ಎಸೆದಿರುವ ವಿಚಾರದ ಕುರಿತು ಓದುಗರು ಬಂಟ್ವಾಳನ್ಯೂಸ್ ಗಮನ ಸೆಳೆದಿದ್ದಾರೆ.

ಪಾಣೆಮಂಗಳೂರಿನಿಂದ ನಂದಾವರಕ್ಕೆ ತೆರಳುವ ಮಾರ್ಗದಲ್ಲಿರುವ ಸೇತುವೆ ಪಕ್ಕ ಪ್ರತಿನಿತ್ಯ ಕಾಣಿಸುವ ಕಸದ ರಾಶಿಯನ್ನು ನೋಡಿದರೆ, ಮಾರಕ ರೋಗಗಳು ಬಂದರೂ ಕಸ ಎಸೆಯುವ ಪ್ರವೃತ್ತಿಯನ್ನು ಜನರು ಇನ್ನೂ ನಿಲ್ಲಿಸಿಲ್ಲ ಎಂದು ಭಾಸವಾಗುತ್ತದೆ.

ಜಾಹೀರಾತು

ಬಂಗ್ಲೆಗುಡ್ಡೆ, ನಂದಾವರ, ಪಾಣೆಮಂಗಳೂರು ಪರಿಸರದಲ್ಲಿಯೇ ಇರುವ ಈ ಮಿನಿ ಸೇತುವೆಯನ್ನು ದಾಟಿಯೇ ಜನಸಂಚಾರ ಇರುವ ಕಾರಣ, ಕಸ ತ್ಯಾಜ್ಯಗಳು ರೋಗಭೀತಿಯನ್ನು ಉಂಟುಮಾಡಿದರೆ, ಎಸೆಯುವವರಿಗೂ ಕಡಿವಾಣ ಹಾಕುವ ಕಾರ್ಯವನ್ನು ಇದಕ್ಕೆ ಸಂಬಂಧಪಟ್ಟವರು ಮಾಡಬೇಕಿದೆ.

ಸೇತುವೆ ಕೆಳಗೆ ನೀರು ಪೂರೈಕೆ ಮಾಡುವ ವ್ಯವಸ್ಥೆಯೂ ಇದ್ದು, ನೀರು ಕಲುಷಿತಗೊಳ್ಳುವ ಭೀತಿಯೂ ಎದುರಾಗಿದೆ. ಮಳೆಗಾಲ ಆರಂಭವಾಗಿದ್ದು ಅದರಿಂದ ಕೊಚ್ಚೆನೀರು ಹರಿದು ಟ್ಯಾಂಕಿನ ನೀರಿನಲ್ಲಿ ಸೇರಿದರೆ ಏನು ಮಾಡುವುದು ಎಂಬ ಭೀತಿಯೂ ಇದೆ. ಈಗಾಗಲೇ ಕಸದಿಂದ ಗಬ್ಬು ವಾಸನೆ ಎದ್ದು  ಸೊಳ್ಳೆ, ಹುಳ ಕೀಟ ಹೊರ ಬರುತ್ತಿದ್ದು ನಾಯಿಗಳು ಕಸವನ್ನು ರಸ್ತೆಗೆ ಎಳೆದು ತರುತ್ತಿದೆ, ಆದ್ದರಿಂದ ಸಜಿಪಮೂನ್ನೂರು ಗ್ರಾಮ ಪಂಚಾಯತ್ ಹಾಗೂ ಬಂಟ್ವಾಳ ಪುರಸಭೆ ಮತ್ತು ಆರೋಗ್ಯ ಇಲಾಖೆ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ.

ಜಾಹೀರಾತು
  • ನಾಗರಿಕ
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ