ಭಾನುವಾರ ಮಳೆಯ ಪ್ರಮಾಣ ಕಡಿಮೆ ಇದ್ದರೂ ಇಡೀ ದಿನ ನೀರಿನ ಪ್ರಮಾಣ ತಗ್ಗಲಿಲ್ಲ. ರಾತ್ರಿ ವೇಳೆ ನೇತ್ರಾವತಿ ನದಿ 8.5 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು.
ಆದರೆ ಸೋಮವಾರ ಬೆಳಗಿನ ಜಾವ 6.9 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿತ್ತು. ಬೆಳಗ್ಗೆ ನೀರಿನ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಭಾನುವಾರವೂ ಪಾಣೆಮಂಗಳೂರಿನ ಆಲಡ್ಕದಲ್ಲಿ ಹಲವು ಮನೆಗಳು ಜಲಾವೃತಗೊಂಡರೆ, ಮನೆಯವರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಯಿತು.
ಬಡ್ಡಕಟ್ಟೆ ಬಸ್ ನಿಲ್ದಾಣ ಸಹಿತ ಬಂಟ್ವಾಳ ಮತ್ತು ಪಾಣೆಮಂಗಳೂರಿನ ಹಲವು ಕಡೆಗಳಲ್ಲಿ ನದಿ ನೀರು ರಸ್ತೆಯಲ್ಲಿ ಭಾನುವಾರವೂ ಇತ್ತು. ಚಿತ್ರಗಳು ಕಿಶೋರ್ ಪೆರಾಜೆ
ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕಾರ್ಯಕ್ರಮ (more…)
| ರಾಯಿ ಗ್ರಾಮ ಪಂಚಾಯಿತಿ: 19 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ (more…)