ಬುಧವಾರ ರಾತ್ರಿಯೇ ಬಂಟ್ವಾಳ ಪೇಟೆಯ ಸೀಲ್ ಡೌನ್ ತೆರವು ವಿಚಾರ ಕುರಿತು ಸಿಎಂ ಜೊತೆ ಚರ್ಚಿಸಿದ್ದೇನೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದ್ಧಾರೆ.
ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆ ಡಿಸಿಎಂ ಅಶ್ವತ್ಥನಾರಾಯಣ ಅವರಿಗೂ ವಿಷಯ ತಿಳಿಸಲಾಗಿದೆ. ಸೀಲ್ಡೌನ್ ಸಡಿಲಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸರಕಾರದ ಮಟ್ಟದಲ್ಲಿ ಪ್ರಯತ್ನಗಳು ಮಾಡುತ್ತಿದ್ದೇನೆ. ಸೀಲ್ಡೌನ್ ಸಡಿಲಿಕೆ ವಿಚಾರವಾಗಿ ಡಿಸಿಎಂ ಅವರು ದ.ಕ.ಜಿಲ್ಲಾಧಿಕಾರಿಯವರ ಜತೆ ಮಾತನಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ತಹಶೀಲ್ದಾರ್ ಹಾಗೂ ಟಿಎಚ್ಒ ಅವರ ಪ್ರಸ್ತಾವನೆಯ ಆಧಾರದಲ್ಲಿ ಕ್ರಮಕೈಗೊಳ್ಳುವ ಕುರಿತು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
Be the first to comment on "ಸೀಲ್ ಡೌನ್ ತೆರವು ಕುರಿತು ನಿನ್ನೆಯೇ ಸಿಎಂ ಜತೆ ಚರ್ಚೆ : ಶಾಸಕ ನಾಯ್ಕ್"