ಸಜೀಪನಡು ಗ್ರಾ.ಪಂ.ನ ಸಂಜೀವಿನಿ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮೇ 14ರಂದು ಬೆಳಗ್ಗೆ 10ಕ್ಕೆ ನಡೆಯಲಿದ್ದು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾ.ಪಂ.ಆಡಳಿತ ಮಂಡಳಿ ಬಿಟ್ಟರೆ ಬೇರೆ ಯಾರಿಗೂ ಭಾಗವಹಿಸುವುದಕ್ಕೆ ಅವಕಾಶವಿಲ್ಲ.
ಸಂಜೀವಿನಿ ಕಟ್ಟಡದ ಜತೆಗೆ ಶಾಲೆಯ ರಂಗಮಂದಿರ, ಸಿಸಿ ಕ್ಯಾಮರಾ ವ್ಯವಸ್ಥೆ, ಸ್ಥಳಾಂತರಗೊಂಡ ಅಂಚೆ ಕಚೇರಿ ಉದ್ಘಾಟನೆ, ದಾನಿಗಳ ಸಹಕಾರದಿಂದ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡ ಶಂಕುಸ್ಥಾಪನೆ, ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಬಿಡುಗಡೆ ನಡೆಯಲಿದೆ.
ಗ್ರಾ.ಪಂ.ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಪ್ರೌಢಶಾಲೆ, ಹಿ.ಪ್ರಾ.ಶಾಲೆ, ಗ್ರಾಮ ಕರಣಿಕರ ಕಚೇರಿ, ಅಂಚೆ ಕಚೇರಿ, ಸಾರ್ವಜನಿಕ ಗ್ರಂಥಾಲಯ, ಅಂಗನವಾಡಿ ಕೇಂದ್ರ ಹೀಗೆ ಎಲ್ಲಾ ವ್ಯವಸ್ಥೆಗಳು ಒಂದೇ ಸ್ಥಳದಲ್ಲಿ ಸಿಗುವ ಸಜೀಪ ವನ್-2020ಗೆ ಇದೇ ಸಂದರ್ಭದಲ್ಲಿ ಚಾಲನೆ ನೀಡಲಾಗುತ್ತದೆ. ಸಾರ್ವಜನಿಕರು ಮನೆಯಲ್ಲೇ ಇದ್ದು, ಹಾರೈಸುವಂತೆ ಗ್ರಾ.ಪಂ.ಅಧ್ಯಕ್ಷ ಮೊಹಮ್ಮದ್ ನಾಸಿರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment on "ಸಜೀಪನಡು ಗ್ರಾಪಂ ಸಜೀಪ ವನ್ -2020ಗೆ 14ರಂದು ಚಾಲನೆ"