ಬಂಟ್ವಾಳ ತಾಲೂಕು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಂಗಳವಾರ ಸಂಜೆ ಭಾರಿ ಗಾಳಿ, ಮಿಂಚು ಗುಡುಗಿನೊಂದಿಗೆ ಮಳೆಯಾಗಿದೆ. ಕಡಬ, ಪುತ್ತೂರು, ಬಂಟ್ವಾಳ, ವಿಟ್ಲ ಸಹಿತ ಗ್ರಾಮೀಣ ಪ್ರದೇಶಗಳಲ್ಲೂ ಗಾಳಿಯೊಂದಿಗೆ ಮಳೆಯಾದ ಕಾರಣ ಕೆಲವೆಡೆ ಮರದ ಗೆಲ್ಲುಗಳು ಬಿದ್ದಿರುವುದು ಹಾಗೂ ಹಾನಿಗಳು ಸಂಭವಿಸಿರುವ ಕುರಿತು ಮಾಹಿತಿಗಳು ಲಭಿಸಿವೆ.
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವು ಎಂಬಲ್ಲಿಯ ಸರಸ್ವತಿ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದೆ.