ಬಂಟ್ವಾಳ

ಬಶೀರ್ ಬಂಟ್ವಾಳ ಅವರಿಂದ ಸಾರ್ವಜನಿಕ ಸೇವೆಗೆ ಇಝ್ಝತುನ್ನೂರು ಯತೀಂ ಖಾನಾ ಗೆ  ಅಂಬುಲೆನ್ಸ್ ಹಸ್ತಾಂತರ

ಬಂಟ್ವಾಳ : ದುಬಾಯಿ ಅಸ್ತರ್ ಆಸ್ಪತ್ರೆಯ ಅಸಿಸ್ಟೆಂಟ್ ಜನರಲ್ ಮೆನೇಜರ್, ಬಶೀರ್ ಬಂಟ್ವಾಳ ಅವರು, ಇತ್ತೀಚೆಗೆ ನಿಧನರಾದ ತನ್ನ ಸಹೋದರ ಮರ್ಹೂಮ್ ಅಬ್ದುರ್ರಹ್ಮಾನ್ ಅವರ ಹೆಸರಿನಲ್ಲಿ ಆ್ಯಂಬುಲೆನ್ಸ್ ಅನ್ನು ಸಾರ್ವಜನಿಕ ಸೇವೆಗಾಗಿ ಭಾನುವಾರ ಲೋಕಾರ್ಪಣೆ ಗೊಳಿಸಿದರು.

ಲೊರೆಟ್ಟೋಪದವು – ಟಿಪ್ಪು ನಗರದ ಇಝ್ಝತುನ್ನೂರು ಯತೀಂ ಖಾನಾ ಗೆ ಅಂಬುಲೆನ್ಸ್ ಅನ್ನು ಹಸ್ತಾಂತರಿಸಿದ ಅವರು  ಮೃತಪಟ್ಟಿರುವ ಸಹೋದರನ ಹೆಸರಿನಲ್ಲಿ ಈ ಆ್ಯಂಬುಲೆನ್ಸ್ ಸಮಾಜಕ್ಕಾಗಿ ಅರ್ಪಿಸಲಾಗಿದೆ. ಯಾವುದೇ ಜಾತಿ ಮತ ಧರ್ಮದ ಭೇದವಿಲ್ಲದೆ ಅವಶ್ಯಕತೆ ಇದ್ದವರು ಇದರ ಪ್ರಯೋಜನ ಪಡೆಯಬಹುದು ಎಂದ ಅವರು ಆ್ಯಂಬುಲೆನ್ಸ್ ನ ಮೂಲಕ ಸರ್ವ ಸಮಾಜದ ಜನರಿಗೆ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

OPTIC WORLD

ಅತಿಥಿಗಳಾಗಿ ಭಾಗವಹಿಸಿದ್ದ ಲೊರೆಟ್ಟೋ ಚರ್ಚ್ ನ ಧರ್ಮಗುರು ಜೇಮ್ಸ್ ಡಿ.ಸೋಜ ಮಾತನಾಡಿ ಮನುಷ್ಯನಲ್ಲಿ ಎಲ್ಲಾ ಸದ್ಗುಣಗಳಿದ್ದರೂ ಮಾನವೀಯತೆ ಇಲ್ಲದಿದ್ದರೆ ಆತನ ಜೀವನ ಸಾರ್ಥಕವಲ್ಲ, ಅಶಕ್ತರು, ಬಡವರ ಸೇವೆಯಲ್ಲಿ ತೊಡಗಿಸಿಕೊಂಡಾಗ ಭಗವಂತನ ಅನುಗ್ರಹ, ಪ್ರೀತಿ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಶೀರ್ ಅವರ ಕಾರ್ಯ ಶ್ಲಾಘನೀಯ ಎಂದರು.

ಜಾಹೀರಾತು

ಸಯ್ಯಿದ್ ಅಸ್ಗರ್ ಅಲಿ ತಂಙಳ್ ಗಂಜಿಮಠ ದುಹಾ ನೆರವೇರಿಸಿದರು. ಬಂಟ್ವಾಳ ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಸಮದ್ ಯಮಾನಿ, ಅಡ್ಯಾರ್ – ಕಣ್ಣೂರು ಜುಮಾ ಮಸೀದಿ ಮುದರ್ರಿಸ್ ಅನ್ಸಾರ್ ಫೈಝಿ ಬುರ್ಹಾನಿ, ನಿವೃತ್ತ ಶಿಕ್ಷಕಿ ಪ್ರಫುಲ್ಲಾ, ಅವರು ಮಾತನಾಡಿ ಬಶೀರ್ ಬಂಟ್ವಾಳ ಅವರ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

VNR GOLD

ಬಂಟ್ವಾಳ ಪುರಸಭಾ ನಿಕಟಪೂರ್ವ ಸದಸ್ಯ ಎ.ಗೋವಿಂದ ಪ್ರಭು, ಯತೀಂ ಖಾನಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ಕೋಶಾಧಿಕಾರಿ ಹಂಝ ಪರ್ಲಿಯ, ಲೊರೆಟ್ಟೋಪದವು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ರಿಯಾಝ್ , ಪ್ರಮುಖರಾದ ಸುಲೈಮಾನ್ ಬಂಟ್ವಾಳ, ಅಹ್ಮದ್ ಹುಸೈನ್ ಮೂಡುಬಿದಿರೆ, ಹಾರೂನ್ ರಶೀದ್ ಬಂಟ್ವಾಳ, ಖಲೀಲುಲ್ಲಾ ಬಂಟ್ವಾಳ,  ಹಮೀದ್ ನಿಝಾಮಿ, ಶಾಕಿರ್  ಮೊದಲಾದವರು ಉಪಸ್ಥಿತರಿದ್ದರು . ಯತೀಂ ಖಾನಾದ ಗುರುಗಳಾದ ಖಲಂದರ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಾದಾತ್ ಕಾವಳಕಟ್ಟೆ ಕಿರಾಅತ್ ಪಠಿಸಿದರು. ರಾಜ್ಯ ತರಬೇತುದಾರ, ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.