ತಾಲೂಕಿನ ನಾನಾ ಕಡೆಗಳಲ್ಲಿ ಇದ್ದ ವಲಸೆ ಕೂಲಿ ಕಾರ್ಮಿಕರನ್ನು ಸೋಮವಾರ ಬಿ.ಸಿ.ರೋಡ್ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಅವರವರ ಊರಿಗೆ ಕಳುಹಿಸಕೊಡಲಾಯಿತು.
ಸುಮಾರು 500ರಷ್ಟು ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದು, ಅವರನ್ನು ಪ್ರತ್ಯೇಕ ವಿಭಾಗಗಳನ್ನಾಗಿ ಮಾಡಲಾಗಿತ್ತು. ತಾಪಂ ಇಒ ರಾಜಣ್ಣ ನೇತೃತ್ವದಲ್ಲಿ ಗ್ರಾಪಂಗಳ ಪಿಡಿಒಗಳು ಅವರನ್ನು ಕರೆತರುವ ವ್ಯವಸ್ಥೆ ಕೈಗೊಂಡು, ವೈದ್ಯಕೀಯ ಪರೀಕ್ಷೆಗೊಳಪಡಿಸಲು ನೆರವಾದರು. ಸುಮಾರು 16 ಬಸ್ಸುಗಳಲ್ಲಿ ಕಾರ್ಮಿಕರು ತೆರಳುತ್ತಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾರ್ಗದರ್ಶನದಲ್ಲಿ ತಾಪಂ ಇಒ ರಾಜಣ್ಣ, ತಹಸೀಲ್ದಾರ್ ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಸೂಕ್ತ ಸೂಚನೆಗಳನ್ನು ಒದಗಿಸಿದರು. ತಾಪಂ, ಕಂದಾಯ, ಪುರಸಭೆ, ಆರೋಗ್ಯ, ಕೆಎಸ್ಸಾರ್ಟಿಸಿ ಸಹಿತ ನಾನಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.
ನಿರಂತರ ಸುದ್ದಿಗಳಿಗೆ ಈ ಗುಂಪಿಗೆ ಸೇರಬಹುದು:
Be the first to comment on "ಬಿ.ಸಿ.ರೋಡಿನಿಂದ ಕೂಲಿ ಕಾರ್ಮಿಕರ ಎರಡನೇ ಟ್ರಿಪ್"