ಮೇ.2ರಂದು ಸಂಜೆ 5 ಗಂಟೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದ ವರದಿಯಂತೆ ನೋವೆಲ್ ಕರೋನಾ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಒಟ್ಟು 601ಕ್ಕೆ ಏರಿದೆ. ಅವುಗಳ ಪೈಕಿ 25 ಮಂದಿ ಸಾವನ್ನಪ್ಪಿದ್ದು, 271 ಮಂದಿ ಬಿಡುಗಡೆ ಹೊಂದಿದ್ದಾರೆ. ಶನಿವಾರ ಮೇ.2ರಂದು ರಾಜ್ಯದಲ್ಲಿ 12 ಹೊಸ ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ಪೀಡಿತ ಒಟ್ಟು 304ರಲ್ಲಿ 297 ಮಂದಿ ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯವು ಸ್ಥಿರವಾಗಿರುತ್ತದೆ. ಒಟ್ಟು 7 ಮಂದಿ ಐಸಿಯುನಲ್ಲಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಇಂದು ರಾಜ್ಯದ ನಾನಾ ಆಸ್ಪತ್ರೆಗಳಿಂದ 20 ಮಂದಿ ಬಿಡುಗಡೆ ಹೊಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ.
Be the first to comment on "ಇಂದು ರಾಜ್ಯದಲ್ಲಿ 12 ಹೊಸ ಪಾಸಿಟಿವ್ ಕೇಸ್"