ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಹೊರಡಿಸಿರುವ ಪತ್ರಿಕಾ ಪ್ರಕಟಣೆಯನನ್ವಯ ಒಟ್ಟು 2 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 662 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಲು ಬಾಕಿ ಇದೆ. ಶುಕ್ರವಾರ 351 ಮಂದಿಯ ಸ್ಯಾಂಪಲ್ ಗಳನ್ನು ಕಳಿಸಲಾಗಿದೆ.
ರೋಗಿ ಸಂಖ್ಯೆ ಪಿ390ರ ದ್ವಿತೀಯ ಸಂಪರ್ಕದಲ್ಲಿದ್ದ ಸುಮಾರು 69 ವಯಸ್ಸಿನ ಪುರುಷ ಬಂಟ್ವಾಳ ಕಸಬಾ ಗ್ರಾಮದ ನಿವಾಸಿ., ರೋಗಿ ಸಂಖ್ಯೆ ಪಿ536ರ ಪ್ರಾಥಮಿಕ ಸಂಪರ್ಕದಲ್ಲಿದ್ದ 62 ವಯಸ್ಸಿನ ಪುರುಷ ಮಂಗಳೂರು ಬೋಳೂರು ಗ್ರಾಮ ನಿವಾಸಿ ಎಂದವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ 18 ಮಂದಿ, ಹೊರಜಿಲ್ಲೆ, ರಾಜ್ಯದ 6 ಮಂದಿ ಸೇರಿ ಒಟ್ಟು ಜಿಲ್ಲೆಯಲ್ಲಿ 22 ಪ್ರಕರಣಗಳು ವರದಿಯಾದಂತಾಗಿದೆ.
ಕಲ್ಲಡ್ಕ ವಲಯದ 7 ಒಕ್ಕೂಟಗಳ ಪದಗ್ರಹಣ ಸಮಾರಂಭ | ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಕಾರ್ಯಕ್ರಮ (more…)
| ರಾಯಿ ಗ್ರಾಮ ಪಂಚಾಯಿತಿ: 19 ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ (more…)