ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ 47 ವರ್ಷದ ಮಹಿಳೆಯೊಬ್ಬರಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದ್ದು, ಒಟ್ಟಾರೆಯಾಗಿ ತಾಲೂಕಿನಲ್ಲಿ 7, ದಕ ಜಿಲ್ಲೆಯಲ್ಲಿ 12 ಮಂದಿ ಗುಣಮುಖರಾಗಿದ್ದು, 2 ಮಂದಿ ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿಯ 2, ಬಂಟ್ವಾಳ ಪೇಟೆಯ 2, ಪಾಣೆಮಂಗಳೂರು ಸಮೀಪದ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಮಹಿಳೆಯ ಕುಟುಂಬದ ಸದಸ್ಯರನ್ನೂ ಕ್ವಾರಂಟೈನ್ ಮಾಡಲಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳನ್ನೂ ನಿರ್ಬಂಧಗೊಳಿಸುವ ಸಾಧ್ಯತೆ ಇದೆ.
ಎ.23ರಂದು ಮೃತಪಟ್ಟಿದ್ದ ಕೇಸ್ ನಂಬರ್ P-432 ವೃದ್ದೆಯ ಸಂಪರ್ಕದಿಂದ ಸೋಂಕು ತಗಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು ಪತ್ತೆಯಾದ ಏಕೈಕ ಕೊರೋನಾ ಪಾಸಿಟಿವ್ ಕೇಸ್ ಆದರೆ ಜಿಲ್ಲೆಯಲ್ಲಿ ಇದು 19ನೇ ಪ್ರಕರಣವಾಗಿದೆ.
Be the first to comment on "ಬಂಟ್ವಾಳ ತಾಲೂಕಿಗೆ ಮತ್ತೊಂದು ಆಘಾತ, ಇನ್ನೊಂದು ಪಾಸಿಟಿವ್ ಕೇಸ್ ಪತ್ತೆ"