ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪ ಅಮ್ಟೂರು ಎಂಬಲ್ಲಿ ಶ್ರೀ ಕೃಷ್ಣ ಭಜನಾ ಮಂದಿರ ಸಹಕಾರದೊಂದಿಗೆ ಊರ ದಾನಿಗಳ ಸಹಾಯದಿಂದ ಬಿಜೆಪಿಯ 182ನೇ ಬೂತ್ ಸಮಿತಿ ನೇತೃತ್ವದಲ್ಲಿ 225 ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.
ಶ್ರೀಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್, ಬಿಜೆಪಿಯ ಪ್ರಮುಖರಾದ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು, ಬೂತ್ ಸಮಿತಿಯ ಅಧ್ಯಕ್ಷರಾದ ಬೈದರಡ್ಕ ಪ್ರಭಾಕರ್ ಶೆಟ್ಟಿ, ಗ್ರಾಪಂ ಸದಸ್ಯರಾದ ಗೋಪಾಲ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾದ ವೇಣು ಗೋಪಾಲ್ ಶೆಟ್ಟಿಗಾರ್, ಕಾರ್ಯದರ್ಶಿಯಾದ ಪುರುಷೋತ್ತಮ ಶಾಂತಿಪಳಿಕೆ, ಜಿತೇಶ್ ಶೆಟ್ಟಿ ಬಾಳಿಕೆ, ಶ್ರೀರಾಮ ವಿದ್ಯಾ ಕೇಂದ್ರದ ಕುಶಾಲಪ್ಪ ಅಮ್ಟೂರು, ಪುರುಷೋತ್ತಮ ಟೈಲರ್, ದಿವಾಕರ ಪೂಜಾರಿ, ಹರೀಶ್ ಬಟ್ಟೆಹಿತಲು, ಕೌಶಲ್ ಶೆಟ್ಟಿ ಹಾಗೂ ಊರಿನ ದಾನಿಗಳು, ಶ್ರೀಕೃಷ್ಣ ಭಜನಾ ಮಂದಿರದ ಪದಾಧಿಕಾರಿಗಳು, ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ದಿನೇಶ್ ಅಮ್ಟೂರು, ಸಂಕಷ್ಟದ ಈ ಸನ್ನಿವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಂತೆ ಕೊರೊನಾದಿಂದ ಸಂಕಷ್ಟಕ್ಕೊಳಗಾದವರಿಗೆ ನೆರವಾಗುವುದರ ಜೊತೆಗೆ ಸರಕಾರಕ್ಕೆ ಪೂರಕವಾಗಿ ಜನರಿಗೆ ನೆರವಾಗೋಣ ಎಂದರು.
(more…)