ಕೇರಳ, ಕರ್ನಾಟಕದ ತಲಪಾಡಿ ಅಂತಾರಾಜ್ಯ ಗಡಿಯನ್ನು ಮಾತ್ರ ತುರ್ತುವೈದ್ಯಕೀಯ ಚಿಕಿತ್ಸೆಗಾಗಿ ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ರೂಪಿಸಿರುವ ಮಾನದಂಡ ಅನುಗುಣವಾಗಿ ತೆರೆಯಲು ಸರ್ವೋಚ್ಛ ನ್ಯಾಯಾಲಯ ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ತುರ್ತು ಜಿಲ್ಲಾ ಮಟ್ಟದ ಕೋವಿಡ್ ನಿಯಂತ್ರಣ ಸಭೆಯನ್ನು ಐ.ಎಂ.ಎ. ಸದಸ್ಯರೊಂದಿಗೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ.
ವೈದ್ಯಕೀಯ ಚಿಕಿತ್ಸೆಗೆ ಕೆಲವು ಮಾನದಂಡ ರೂಪಿಸಲಾಗಿದ್ದು, ಇಂತಿವೆ.
- ಕೇವಲ ಅತ್ಯಂತ ತುರ್ತು ಚಿಕಿತ್ಸೆ, ರಸ್ತೆ ಅಪಘಾತಗಳ ಚಿಕಿತ್ಸೆಗೆ ಸರಕಾರಿ ಆಂಬುಲೆನ್ಸ್ ಗಳಲ್ಲಿ ರೋಗಿಯನ್ನು ಕರೆತರಲು ಅನುಮತಿ.
- ಕಾಸರಗೋಡಿನ ಸ್ಥಳೀಯ ಸರಕಾರಿ ವೈದ್ಯಾಧಿಕಾರಿಯು ಚಿಕಿತ್ಸೆಗೆ ಬರುವ ರೋಗಿಯು ನಾನ್ ಕೋವಿಡ್ ಎಂದು ಮತ್ತು ಚಿಕಿತ್ಸೆಯು ಕಾಸರಗೋಡಿನಲ್ಲಿ ಲಭ್ಯವಿಲ್ಲವೆಂದು ದೃಢೀಕರಿಸಿ ಸಲ್ಲಿಸಬೇಕು.
- ರೋಗಿಯನ್ನು ಕರೆತರುವ ಆಂಬುಲೆನ್ಸ್ ಗಳನ್ನು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ಸಚಿವಾಲಯ ನಿರ್ದೇಶನದಂತೆ ಸ್ಯಾನಿಟೈಸ್ ಮಾಡಬೇಕು.
- ರೋಗಿಯೊಂದಿಗೆ ಕೇವಲ ಒಬ್ಬ ಸಹಾಯಕ, ಆಂಬುಲೆನ್ಸ್ ಚಾಲಕ ಮತ್ತು ಒಬ್ಬ ಪ್ಯಾರಾಮೆಡಿಕಲ್ ಮಾತ್ರ ಕರೆತರಲು ಅವಕಾಶ
- ತಲಪಾಡಿ ಗಡಿಯಲ್ಲಿ ವೈದ್ಯಕೀಯ ತಂಡ ನಿಯೋಜಿಸಲಾಗಿದ್ದು, ಆಂಬುಲೆನ್ಸ್ ಮತ್ತು ರೋಗಿಯನ್ನು ಪ್ರಥಮ ಹಂತದ ದಾಖಲೆಗಳನ್ನು ನಿಗದಿತ ಚೆಕ್ ಲಿಸ್ಟ್ ನಲ್ಲಿ ಪರಿಶೀಲಿಸಿ ನಂತರ ಜಿಲ್ಲೆಗೆ ಪ್ರವೇಶ ನೀಡಲಾಗುವುದು.
Be the first to comment on "ಕೇರಳ ಆಂಬುಲೆನ್ಸ್ ಪ್ರವೇಶಕ್ಕೆ ಅವಕಾಶ – ಷರತ್ತುಗಳು ಅನ್ವಯ"