ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನೇರಳಕಟ್ಟೆ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಚೌಟ ಮಾಣಿ ಹಾಗೂ ಉಪಾಧ್ಯಕ್ಷರಾಗಿ ತನಿಯಪ್ಪ ಗೌಡ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಚುನಾವಣಾಧಿಕಾರಿ ಬಿ.ವಿ.ಪ್ರತಿಮಾ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜೀವ ಪೂಜಾರಿ ಸಹಕರಿಸಿದರು.
ನಿರ್ದೇಶಕರಾಗಿ ನಾರಾಯಣ ಶೆಟ್ಟಿ ಮಾಣಿ , ಸನತ್ ರೈ ಅನಂತಾಡಿ, ಪಾಂಡುರಂಗ ವಿ. ಕಾಮತ್ , ರಾಘವ ಪೆರಾಜೆ, ಸಂಕಪ್ಪ ಜೆ. ಅನಂತಾಡಿ, ಸುಧಾಕರ ಪಿ.ಪೆರಾಜೆ, ಶ್ರೀನಿವಾಸ ಪೂಜಾರಿ ಪೆರಾಜೆ, ವೆಂಕಟೇಶ್ ಕೋಟ್ಯಾನ್ ಅನಂತಾಡಿ, ಭಾರತಿ ಮಾಣಿ, ಶಾಲಿನಿ ನೆಟ್ಲಮುಡ್ನೂರು, ನಿರಂಜನ ರೈ ನೇಮಕಗೊಂಡಿದ್ದಾರೆ.
Be the first to comment on "ನೇರಳಕಟ್ಟೆ ವ್ಯವಸಾಯಿಕ ಸಂಘ ಅಧ್ಯಕ್ಷರಾಗಿ ಪುಷ್ಪರಾಜ ಚೌಟ"