ರಾಜ್ಯ ಯುವಜನ ಸಬಲೀಕರಣ, ಕ್ರೀಡಾ ಇಲಾಖೆ ಹಾಗೂ ಶ್ರೀ ಉಮಾಮಹೇಶ್ವರ ಯುವಕಮಂಡಲ ಬಳಂಜ ಆಶ್ರಯದಲ್ಲಿ ಜ.18ರಂದು ಬೆಳ್ತಂಗಡಿ ತಾಲೂಕಿನ ಬಳಂಜದಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಬಂಟ್ವಾಳ ತಾಲೂಕಿನ ಮೇಲ್ಕಾರಿನ ಗುರುಪ್ರಿಯಾ ಶಿವಾನಂದ ಕಾಮತ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.
ಇವರು ಮೇಲ್ಕಾರ್ ಗುರುಕುಲ ಕಲಾಕೇಂದ್ರದ ಸಂಚಾಲಕಿಯಾಗಿದ್ದು, ಸುಗಮ ಸಂಗೀತ ಶಿಕ್ಷಕಿಯಾಗಿದ್ದಾರೆ. ವೈಯಕ್ತಿಕ ವಿಭಾಗದ ಭಾವಗೀತೆ, ರಂಗಗೀತೆ, ಲಾವಣಿ ಗೀತೆ, ತುಳು ಭಾವಗೀತೆ ಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅವರು ಆಯ್ಕೆಯಾದರು.
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)