ಬಂಟ್ವಾಳ

ಬಂಟ್ವಾಳ ಭಂಡಾರಿ ಸಭಾ ಭವನ ಡಿ.15 ರಂದು ಉದ್ಘಾಟನೆ

ಬಂಟ್ವಾಳ ಬೈಪಾಸ್ ರಸ್ತೆಯ ಅಜೆಕಲದಲ್ಲಿ ನೂತನ ಭಂಡಾರಿ ಸಭಾ ಭವನದ ಉದ್ಘಾಟನಾ ಸಮಾರಂಭವು ಡಿಸೆಂಬರ್ 15 ಆದಿತ್ಯವಾರ ದಂದು ಬೆಳಿಗ್ಗೆ ಗಂಟೆ 7:00 ರಿಂದ 8:00 ಗಂಟೆಯ ವರೆಗೆ ಗಣಹೋಮ ನಂತರ ಸಭಾಭವನದ ಮುಖ್ಯದ್ವಾರ ಉದ್ಘಾಟನೆಯನ್ನು ಬೇಬಿ ಐಶಾನಿ ಅನೂಪ್ ಪುಣ್ಕೆದಡಿ ಕಕ್ಯಪದವು ಉದ್ಘಾಟಿಸಲಿದ್ದಾರೆ ಬೆಳಿಗ್ಗೆ ಗಂಟೆ 9:00 ರಿಂದ 10:30 ರ ತನಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ

ಜಾಹೀರಾತು

ಸಭಾಭವನದ ವೇದಿಕೆಯ ಉದ್ಘಾಟನೆಯನ್ನು  ಲೀಲಾವತಿ ಸದಾಶಿವ ಭಂಡಾರಿ ಹೊಸ್ಮಾರು ಬಂಟ್ವಾಳ ಉದ್ಘಾಟಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ , ಮಾಜಿ ಸಚಿವ ರಮಾನಾಥ ರೈ , ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ  ಸುರೇಶ್ ಭಂಡಾರಿ ಕಡಂದಲೆ , ಭಂಡಾರಿ ಮಹಾಮಂಡಳದ ಅಧ್ಯಕ್ಷ  ಸದಾಶಿವ ಭಂಡಾರಿ ಸಕಲೇಶಪುರ ಆಗಮಿಸಲಿದ್ದಾರೆ ಭಂಡಾರಿ ಸಮಾಜ ಬಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂಟ್ವಾಳ ಭಂಡಾರಿ ಸಭಾಭವನದ ಉದ್ಘಾಟನಾ ಸಮಾರಂಭದ ಶುಭ ಕಾರ್ಯಕ್ರಮಕ್ಕೆ ಸಹಕರಿಸಿ ಪ್ರೋತ್ಸಾಹಿಸ ಬೇಕಾಗಿ ಬಂಟ್ವಾಳ ಭಂಡಾರಿ ಸಮಾಜ ಸಂಘದ ಅಧ್ಯಕ್ಷ  ದಿವಾಕರ ಶಂಭೂರು ತಿಳಿಸಿದ್ದಾರೆ

ಗೌರವ ಅಧ್ಯಕ್ಷ  ಬಾಬು ಭಂಡಾರಿ ಅಜೆಕಲ , ಅಧ್ಯಕ್ಷ  ದಿವಾಕರ ಶಂಭೂರು , ಕಾರ್ಯದರ್ಶಿ  ಸದಾಶಿವ ಭಂಡಾರಿ ನಂದೊಟ್ಟು , ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು , ಬಂಟ್ವಾಳ ಭಂಡಾರಿ ಯುವ ಘಟಕದ ಅಧ್ಯಕ್ಷ ಶ್ರೀ ಡಾ. ಪ್ರಶಾಂತ್ ಕಲ್ಲಡ್ಕ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು , ಮಹಿಳಾ ಘಟಕದ ಅಧ್ಯಕ್ಷೆ  ದಾಕ್ಷಾಯಿಣಿ ನಾಗೇಶ್ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ನೇತೃತ್ವದಲ್ಲಿ ಹಾಗೂ ದಾನಿಗಳ ಸಹಕಾರದೊಂದಿಗೆ ಬಂಟ್ವಾಳ ಭಂಡಾರಿ ಸಭಾಭವನ ಲೋಕಾರ್ಪಣೆಯಾಗಲಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.