ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರಿನಲ್ಲಿ ಶನಿವಾರ ಸಂಜೆ ನಡೆದ ದುರ್ಘಟನೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ಗುಂಡಿ ತೆಗೆಯುತ್ತಿದ್ದ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ.
ಬೆಟ್ಟದ ಬದಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಪಂಚಾಂಗ ನಿರ್ಮಿಸುವ ಕೆಲಸ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸಂಜೆ ಐದೂವರೆ ಹೊತ್ತಿಗೆ ಇದ್ದಕ್ಕಿದ್ದಂತೆ ಮೇಲಿನ ಬೆಟ್ಟದಿಂದ ಮಣ್ಣು ಕುಸಿದುಘಟನೆ ಸಂಭವಿಸಿದೆ. ಆ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಆಲಂಗಾರು ನಿವಾಸಿ ಬಾಳಪ್ಪ ನಾಯ್ಕ (56),.ಮುರುವ ನಿವಾಸಿ ಮಾನೀಲ ಗ್ರಾಮದ ಪ್ರಕಾಶ, .ಕಾಪುಮಜಲು ನಿವಾಸಿ ವಿಟ್ಲ ಪಡ್ನೂರು ಗ್ರಾಮದ ರಮೇಶ್ (50) ಮೃತಪಟ್ಟಿದ್ದಾರೆ. ಮತ್ತೋರ್ವ ಕಾರ್ಮಿಕ ಉಳ್ಳಾಲ ಕುತ್ತಾರು ನಿವಾಸಿ ಪ್ರಭಾಕರ್ ಗಾಯಗೊಂಡಿರುತ್ತಾರೆ. ಸದರಿ ಮೃತದೇಹಗಳನ್ನು ಮತ್ತು ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಸಹಿತ ಗ್ರಾಮಕರಣಿಕರು, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದರು.
Be the first to comment on "ಗುಡ್ಡ ಜರಿದು ಮೂವರು ಕಾರ್ಮಿಕರು ಮೃತ್ಯು, ಮತ್ತೋರ್ವ ಗಂಭೀರ"