ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡಿನ ಗೀತಾಂಜಲಿ ಕಲ್ಯಾಣ ಮಂಟಪದಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಿತು. ಸಮಾಜ ಬಾಂಧವರು ಅದರಲ್ಲಿಯೂ ಯುವಪೀಳಿಗೆಯು ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣವಾಗಿ ಮೈಮರೆಯುವುದು ಬಿಟ್ಟು ಸಾಮಾಜಿಕ ಚಿಂತನೆ, ದೈವ ಭಕ್ತಿ, ಗುರುಹಿರಿಯರಲ್ಲಿ ಗೌರವ, ಧಾರ್ಮಿಕ ಚಿಂತನೆ ಹಾಗೂ ರಾಷ್ಟ್ರಭಕ್ತಿಯನ್ನು ಮೈಗೂಡಿಸಿಗೊಂಡರೆ ಮುಂಬರುವ ಭವ್ಯ ಭವಿಷ್ಯಕ್ಕೆ ನಾಂದಿಯಾಗುತ್ತದೆ. ಎಂದು ಕಾತ್ಯಾಯನಿ ಮಠ, ಮಂಗಳೂರು ಪ್ರಧಾನ ಅರ್ಚಕರು, ಹಾಗೂ ಕರ್ನಾಟಕ ರಾಜ್ಯ ಕೊಂಕಣಿ ಅಕಾಡೆಮಿಯ ಸದಸ್ಯ ವೇದಮೂರ್ತಿ ಎಂ. ಗೋಪಾಲಕೃಷ್ಣ ಭಟ್ ಹೇಳಿದರು
ಈ ಸಂದರ್ಭ ಮಾತನಾಡಿದ ಜಿಎಸ್ ಬಿ ದೇವಸ್ಥಾನಗಳ ಒಕ್ಕೂಟ ಅಧ್ಯಕ್ಷ ಜಗನ್ನಾಥ ಕಾಮತ್ ಸಮಾಜ ಹಾಗೂ ಸಂಘ ಸಂಸ್ಥೆಯಲ್ಲಿ ಐಕ್ಯಮತ್ಯದಿಂದ ತೊಡಗಿಸಿಕೊಂಡರೆ ಅದೇ ನಾವು ಸಮಾಜಕ್ಕೆ ಸಲ್ಲಿಸುವ ಅತೀ ದೊಡ್ಡ ಕಾಣಿಕೆ ಎಂದರು.
ಸಮಿತಿಯ ಅಧ್ಯಕ್ಷರಾದ ಯು. ಸುರೇಶ್ ನಾಯಕ್ ಸಭಾಧ್ಯಕ್ಷತೆಯನ್ನು ವಹಿಸಿದರು. ಮಂಜುನಾಥ್ ಪೈ, ದುರ್ಗಾದಾಸ್ ಶೆಣೈ, ಕೃಷ್ಣ ನಾಯಕ್, ರಘುವೀರ್ ಕಾಮತ್, ನಾಗೇಂದ್ರ ನಾಯಕ್, ಮಹೇಶ್ ನಾಯಕ್, ಹಾಗೂ ಅನಂತಕೃಷ್ಣ ನಾಯಕ್, ನಾರಾಯಣ ಶೆಣೈ ಹಾಗೂ ಇತರ ಸದಸ್ಯರು ಸಹಕರಿಸಿದರು. ಪವನ್ ಕುಮಾರ್ ನಾಯಕ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಎಂ. ಸುಬ್ರಹ್ಮಣ್ಯ ಪೈ ಸ್ವಾಗತಿಸಿ, ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು.
Be the first to comment on "ಸಮಾಜಚಿಂತನೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ"