ಸಾಂಸ್ಕೃತಿಕ

21ರಂದು ವಿದುಷಿ ಅಯನಾ ಪೆರ್ಲ ಅವರ ಮಾರ್ಗಮ್ ಭರತನಾಟ್ಯ ಪ್ರದರ್ಶನ

ಮಂಗಳೂರು: ಹೊಸ ತಲೆಮಾರಿನ ಪ್ರತಿಭಾವಂತ ಮತ್ತು ಪ್ರಯೋಗಶೀಲ ನೃತ್ಯ ಕಲಾವಿದೆಯೆಂದು ಹೆಸರಾಗಿರುವ ವಿದುಷಿ ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರದರ್ಶನ ’ಮಾರ್ಗಮ್ ಹೆಸರಿನಲ್ಲಿ ಮಂಗಳೂರು ಪುರಭವನದಲ್ಲಿ ಇದೇ 21 ರ ಶನಿವಾರದಂದು ಸಂಜೆ 6  ಗಂಟೆಗೆ ಆಯೋಜನೆಗೊಂಡಿದೆ.

ಜಾಹೀರಾತು

ನಾಡಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶಿಸಿರುವ ವಿದುಷಿ ಅಯನಾ ಪೆರ್ಲ ಮಂಗಳೂರಿನಲ್ಲಿ ವರ್ಷಕ್ಕೊಮ್ಮೆ ವಿಶೇಷ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಮಾರ್ಗಮ್ ಎಂಬ ಹೆಸರಿನ ಶುದ್ಧ ಪಾರಂಪರಿಕ ಶೈಲಿಯ ಭರತನಾಟ್ಯ ಪ್ರದರ್ಶನ ಇದಾಗಿದ್ದು, ನಗರದ ಭೂಮಿಗೀತ ಸಾಹಿತ್ಯಿಕ – ಸಾಂಸ್ಕೃತಿಕ ಸಂಸ್ಥೆ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ.

ಪಕ್ಕವಾದ್ಯದಲ್ಲಿ ಅಯನಾ ಅವರ ನೃತ್ಯಗುರು ವಿದುಷಿ ಶಾರದಾಮಣಿ ನಟುವಾಂಗದಲ್ಲಿ ಸಹಕರಿಸಲಿರುವರು. ಹಾಡುಗಾರಿಕೆಯಲ್ಲಿ ರಜನಿ ಚಿಪ್ಳೂಣ್ ಕರ್, ಮೃದಂಗದಲ್ಲಿ ವಿದ್ವಾನ್ ರಾಜನ್ ಪಯ್ಯನ್ನೂರ್ ಮತ್ತು ವೀಣೆಯಲ್ಲಿ ಪವನ ಬಿ. ಆಚಾರ್ ಪಕ್ಕವಾದ್ಯ ಸಹಕಾರ ನೀಡುವರು.

www.bantwalnews.com  ಸಂಪಾದಕ: HARISH MAMBADY

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ