ಮಂಗಳೂರು: ಹೊಸ ತಲೆಮಾರಿನ ಪ್ರತಿಭಾವಂತ ಮತ್ತು ಪ್ರಯೋಗಶೀಲ ನೃತ್ಯ ಕಲಾವಿದೆಯೆಂದು ಹೆಸರಾಗಿರುವ ವಿದುಷಿ ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರದರ್ಶನ ’ಮಾರ್ಗಮ್ ಹೆಸರಿನಲ್ಲಿ ಮಂಗಳೂರು ಪುರಭವನದಲ್ಲಿ ಇದೇ 21 ರ ಶನಿವಾರದಂದು ಸಂಜೆ 6 ಗಂಟೆಗೆ ಆಯೋಜನೆಗೊಂಡಿದೆ.
ಜಾಹೀರಾತು
ನಾಡಿನ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶಿಸಿರುವ ವಿದುಷಿ ಅಯನಾ ಪೆರ್ಲ ಮಂಗಳೂರಿನಲ್ಲಿ ವರ್ಷಕ್ಕೊಮ್ಮೆ ವಿಶೇಷ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಮಾರ್ಗಮ್ ಎಂಬ ಹೆಸರಿನ ಶುದ್ಧ ಪಾರಂಪರಿಕ ಶೈಲಿಯ ಭರತನಾಟ್ಯ ಪ್ರದರ್ಶನ ಇದಾಗಿದ್ದು, ನಗರದ ಭೂಮಿಗೀತ ಸಾಹಿತ್ಯಿಕ – ಸಾಂಸ್ಕೃತಿಕ ಸಂಸ್ಥೆ ಈ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಪಕ್ಕವಾದ್ಯದಲ್ಲಿ ಅಯನಾ ಅವರ ನೃತ್ಯಗುರು ವಿದುಷಿ ಶಾರದಾಮಣಿ ನಟುವಾಂಗದಲ್ಲಿ ಸಹಕರಿಸಲಿರುವರು. ಹಾಡುಗಾರಿಕೆಯಲ್ಲಿ ರಜನಿ ಚಿಪ್ಳೂಣ್ ಕರ್, ಮೃದಂಗದಲ್ಲಿ ವಿದ್ವಾನ್ ರಾಜನ್ ಪಯ್ಯನ್ನೂರ್ ಮತ್ತು ವೀಣೆಯಲ್ಲಿ ಪವನ ಬಿ. ಆಚಾರ್ ಪಕ್ಕವಾದ್ಯ ಸಹಕಾರ ನೀಡುವರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "21ರಂದು ವಿದುಷಿ ಅಯನಾ ಪೆರ್ಲ ಅವರ ಮಾರ್ಗಮ್ ಭರತನಾಟ್ಯ ಪ್ರದರ್ಶನ"
Be the first to comment on "21ರಂದು ವಿದುಷಿ ಅಯನಾ ಪೆರ್ಲ ಅವರ ಮಾರ್ಗಮ್ ಭರತನಾಟ್ಯ ಪ್ರದರ್ಶನ"