- ಚಾರ್ಮಾಡಿ, ಶಿರಾಡಿಯಲ್ಲಿ ಡೇಂಜರ್, ಅನಿವಾರ್ಯವಾದರಷ್ಟೇ ಪ್ರವಾಸ ತೆರಳಿ
ದಕ್ಷಿಣ ಕನ್ನಡ ಜಿಲ್ಲೆಗೆ ಈಗ ಪ್ರವಾಸಕ್ಕೇನಾದರೂ ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿ ಬರುವುದಾದರೆ ಒಂದೆರಡು ದಿನಗಳ ಮಟ್ಟಿಗೆ ಮುಂದೂಡುವುದು ಒಳ್ಳೆಯದು. ಭಾರಿ ಮಳೆ ರಸ್ತೆ ಸಂಚಾರಿಗಳಿಗೆ ಅಪಾಯವನ್ನು ತಂದೊಡ್ಡಿದೆ.
ಮಂಗಳೂರು ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯಲ್ಲಿ ಸದ್ಯಕ್ಕೆ ರಸ್ತೆ ಸಂಚಾರಕ್ಕೆ ತೊಂದರೆ ಇಲ್ಲವಾದರೂ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಂಚರಿಸುವವರು ಮುಂದಕ್ಕೆ ರಸ್ತೆ ಸರಿಯಾಗಿದೆಯೋ ಎಂದು ಗಮನಿಸಿಯೇ ಹೊರಡಬೇಕು.
ಮಂಗಳವಾರ ಬೆಳಗ್ಗೆ ಚಾರ್ಮಾಡಿ ಘಾಟಿ ರಸ್ತೆಯಲ್ಲಿ 7-8ನೇ ತಿರುವಿನಲ್ಲಿ ರಸ್ತೆಗೆ ಮರ ಬಿದ್ದು ಎರಡು ಗಂಟೆ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಅದಾದ ಬಳಿಕ 9-8 ನೇ ತಿರುವಿನ ಹಾಗೂ 2-3 ನೇ ತಿರುವಿನ ಮಧ್ಯೆ ಕುಸಿತವಾದ ಕಡೆ ಜೆಸಿಬಿ ಮೂಲಕ ತೆರವು ಕಾರ್ಯ ನಡೆಯಿತು.
ಸಕಲೇಶಪುರದಲ್ಲಿ ಮಳೆಯಾಗುತ್ತಿರುವ ಕಾರಣ, ಶಿರಾಡಿ ಘಾಟಿಯಲ್ಲೂ ಮಣ್ಣು ರಸ್ತೆಗೆ ಕುಸಿದು ಬೀಳುವ ಅಪಾಯಗಳೂ ಇವೆ. ಸದ್ಯಕ್ಕಂತೂ ವಾಹನಗಳು ಇಲ್ಲಿ ಓಡಾಡುತ್ತಿದ್ದು, ಗ್ಯಾರಂಟಿ ಹೇಳಲಾಗುವುದಿಲ್ಲ.
Be the first to comment on "ಭಾರಿ ಮಳೆ – ಘಾಟಿ ರಸ್ತೆ ಸಂಚಾರಿಗಳ ಗಮನಕ್ಕೆ"