ಬರಮುಕ್ತ ಕರ್ನಾಟಕ ಆಂದೋಲನದ ಹೆಜ್ಜೆಯಗಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಬಂಟ್ವಾಳ, ಲೊರೆಟ್ಟೋ ಚರ್ಚ್ ವಿದ್ಯಾಸಂಸ್ಥೆಗಳು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಲೊರೆಟ್ಟೋ ಫ್ರೆಂಡ್ಸ್ ಮತ್ತು ಕಥೋಲಿಕ್ ಸಭಾ ಲೊರೆಟ್ಟೊ ವತಿಯಿಂದ ಸಸಿ ನೆಡುವ, ವಿತರಿಸುವ ಕಾರ್ಯಕ್ರಮ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಚರ್ಚ್ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಡಿಸೋಜ ಸಸಿ ನೆಡುವ ಮೂಲಕ ಉದ್ಘಾಟಿಸಿದರು.
ಚರ್ಚ್ ವ್ಯಾಪ್ತಿಯಲ್ಲಿ ಹತ್ತು ವಿವಿಧ ತಳಿಗಳ ಸಸಿಗಳನ್ನು ನೆಡಲಾಯಿತು. ಮುಖ್ಯ ಅತಿಥಿಯಾಗಿ ರೈತಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ರೈತಸಂಘದ ಹಿನ್ನೆಲೆ, ಪರಿಸರದ ಕುರಿತು ನಮ್ಮ ಜವಾಬ್ದಾರಿಯ ಕುರಿತು ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಲೊರೆಟ್ಟೊ ರೈತ ಸಂಘ ವಲಯಾಧ್ಯಕ್ಷ ಓಸ್ವಾಲ್ಡ್ ಫರ್ನಾಂಡೀಸ್ ಮಾತನಾಡಿ, ಕಾರ್ಯಕ್ರಮದೊಂದಿಗೆ ಸಹಕರಿಸಿದ ಸಂಘ, ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ರೋಟರಿ ಕ್ಲಬ್ ಲೊರೆಟ್ಟೊ ನಿಕಟಪೂರ್ವ ಅಧ್ಯಕ್ಷ ಅವಿಲ್ ಮಿನೇಜಸ್, ಬಂಟ್ವಾಳ ರೈತಸಂಘ ಧ್ಯಕ್ಷ ಪ್ರೇಮನಾಥ ಬಾಳ್ತಿಲ, ಸಂಪನ್ಮೂಲ ವ್ಯಕ್ತಿಯಾಗಿ ದಿಶಾ ಟ್ರಸ್ಟ್ ನಿರ್ದೇಶಕ ಸಿಲ್ವೆಸ್ಟರ್ ಡಿಸೋಜ, ಲೊರೆಟ್ಟೋ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಂ.ಪೀಟರ್ ಗೋನ್ಸಾಲ್ವಿಸ್, ಭಗಿನಿ ಇಡೋವ್ ರೋಡ್ರಿಗಸ್, , ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಅಧ್ಯಕ್ಷ ಪದ್ಮರಾಜ ಬಲ್ಲಾಳ್, ಲೊರೆಟ್ಟೋ ಫ್ರೆಂಡ್ಸ್ ಅಧ್ಯಕ್ಷ ಪ್ರವೀಣ್ ಪಂಟೋ, ಕಥೋಲಿಕ್ ಸಭಾ ಅಧ್ಯಕ್ಷ ಮಾರ್ಕ್ ಲೊಬೊ ಉಪಸ್ಥಿತರಿದ್ದರು. ರೋಟರಿ ಹಿಲ್ಸ್ ನ ನಿಕಟಪೂರ್ವ ಕಾರ್ಯದರ್ಶಿ ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ರೈತಸಂಘ ಗೌರವಾಧ್ಯಕ್ಷ ಐವನ್ ಮಿನೇಜಸ್ ವಂದಿಸಿದರು. ಶಿಕ್ಷಕಿ ಅನುಪಮಾ, ಸ್ವಾತಿ ಕಾರ್ಲೊ ನಿರೂಪಿಸಿದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಗಿಡ ವಿತರಿಸಲಾಯಿತು.
Be the first to comment on "ಲೊರೆಟ್ಟೋದಲ್ಲಿ ವನಮಹೋತ್ಸವ"