ಪವಿತ್ರ ರಂಝಾನ್ ತಿಂಗಳಲ್ಲಿ ಮುಸ್ಲಿಮರು ಪಾಲಿಸಿದ ಧಾರ್ಮಿಕ ಪ್ರಜ್ಞೆ ಹಾಗೂ ದೇವಭಯವನ್ನು ವರ್ಷದ ಇತರ ಹನ್ನೊಂದು ತಿಂಗಳಲ್ಲೂ ಪಾಲಿಸಿಕೊಂಡು ಬರುವ ಮೂಲಕ ಇಹ-ಪರ ಮೋಕ್ಷ ಸಂಪಾದನೆಗೆ ಮುಂದಾಗಬೇಕು ಎಂದು ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಉಸ್ತಾದ್ ಕರೆ ನೀಡಿದರು.
ಬುಧವಾರ ಮಸೀದಿಯಲ್ಲಿ ನಡೆದ ಈದುಲ್ ಫಿತ್ರ್ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತುಬಾಗೆ ನೇತೃತ್ವ ನೀಡಿದ ಬಳಿಕ ಸಂದೇಶ ನೀಡಿದರು.
ಈದುಲ್ ಫಿತ್ರ ವಿಶೇಷ ಪ್ರಾರ್ಥನೆಯ ಬಳಿಕ ಮುಸ್ಲಿಮರು ಪರಸ್ಪರ ಹಸ್ತಲಾಘವ, ಆಲಿಂಗನ ಮಾಡುವ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಮುಂಜಾನೆಯೇ ಹೊಸ ವಸ್ತ್ರಗಳನ್ನು ಧರಿಸಿ ಪುರುಷರು ಹಾಗೂ ಮಕ್ಕಳು ಮಸೀದಿಗೆ ಬಂದು ದಿನದ ವಿಶೇಷ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ದಾನ ಧರ್ಮಗಳನ್ನು ನಡೆಸುವ ಮೂಲಕ ಕೃತಾರ್ಥರಾದರು.
Be the first to comment on "ಬಂಟ್ವಾಳ ತಾಲೂಕಿನಾದ್ಯಂತ ಈದುಲ್ ಫಿತ್ರ್ ಶುಭಾಶಯ ವಿನಿಮಯ"