- ಇಂದು ಅಕ್ಷಯ ತೃತೀಯ ವಿಶೇಷ, ಚಿನ್ನ ಖರೀದಿಗೆ ಸಕಾಲ
ಇಂದು ವೈಶಾಖ ಮಾಸದ ಮೂರನೇ ದಿನವೇ ಅಕ್ಷಯ ತೃತೀಯ. ವೇದ, ಪುರಾಣಗಳ ಪ್ರಕಾರ ಇಂದು ವಿಶೇಷ ದಿನ. ಯಾವುದೇ ಶುಭ ಕಾರ್ಯ ಪ್ರಾರಂಭಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ.ಹೀಗಾಗಿಯೇ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿಗೆ ಈ ದಿನ ಶುಭದಿನ.
ಚಿನ್ನ ಕೊಳ್ಳಿ, ಸಾದ್ಯವಾದರೆ ದಾನ ಮಾಡಿ, ಹೊಸ ಯೋಜನೆಗಳಿಗೆ ಅಡಿಪಾಯ ಹಾಕಿ ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿ ನಿಮ್ಮ ಬಾಳು ಬಂಗಾರವಾಗಲಿ ಎಂದು ಈ ಸಂದರ್ಭಕ್ಕೆ ಹಾರೈಕೆ.
ಇಂದು ಚಿನ್ನ ಖರೀದಿಸಿದಲ್ಲಿ ಮನೆಯಲ್ಲಿ ಚಿನ್ನ ಅಕ್ಷಯ ವಾಗುವುದು ಎಂಬ ನಂಬಿಕೆಯಿಂದ ಇಂದಿಗೆ ಕೆಲ ದಿನಗಳ ಹಿಂದೆಯೇ ಯಾವ್ಯಾವ ಖರೀದಿಯಾಗಬೇಕು ಎಂಬ ಲೆಕ್ಕಾಚಾರವನ್ನು ಮಾಡಲಾಗುತ್ತದೆ.
ಸಾಮಾನ್ಯವಾಗಿ ಮಗುವಿಗೆ ಕಿವಿ ಚುಚ್ಚಿಸಿ ಕೊಳ್ಲಬೇಕು, ಮೂಗು ಚುಚ್ಚಿಸಿ ಕೊಳ್ಳ ಬೇಕು ಎಂಬ ಯೋಚನೆಯಲ್ಲಿ ಕೆಲವರಿದ್ದರೆ, ಹಲವರು ಕನಿಷ್ಠ ಪಕ್ಷ ಒಂದು ಗ್ರಾಮ್ ಚಿನ್ನದ ನಾಣ್ಯವನ್ನಾದರೂ ಖರೀದಿಸೋಣ, ಅಕ್ಷಯ ತೃತೀಯದಂದು ನಮ್ಮ ಬದುಕಿನಲ್ಲಿ ನೆಮ್ಮದಿ, ಸುಖ, ಶಾಂತಿ ಅಕ್ಷಯವಾಗುತ್ತದೆ ಎಂಬ ಅಚಲ ನಂಬಿಕೆ ಹೊಂದಿರುತ್ತಾರೆ.
ಅದಕ್ಕಾಗಿಯೇ ತಮಗಿಷ್ಟವಾದ ಮಳಿಗೆಗೆ ಹೋಗಿ, ತಾವು ಬಯಸಿದ ವಿವಿಧ ಬಗೆಯ ವಿನ್ಯಾಸದ ಆಭರಣವನ್ನು ಅಕ್ಷಯ ತೃತೀಯದ ದಿನದಂತೇ ಖರೀದಿಸಬೇಕು ಎಂದು ಆ ದಿನಕ್ಕಾಗಿ ಕಾಯುತ್ತಲಿರುತ್ತಾರೆ. ಹೀಗಾಗಿಯೇ ಇಂದು ಆಭರಣದಂಗಡಿ ಮಳಿಗೆಗೆ ಭೇಟಿ ನೀಡುವವರ ಸಂಖ್ಯೆ ಜಾಸ್ತಿ.
ಸಾಮಾನ್ಯವಾಗಿ ಅಕ್ಷಯ ತೃತೀಯ ಬಂದರೆ ಸಾಲು ಸಾಲು ಆಫರ್ ಗಳು, ದರಕಡಿತದ ಯೋಜನೆಗಳು ನಮ್ಮನ್ನು ಆಕರ್ಷಿಸುತ್ತವೆ. ಆದರೆ ಬಿ.ಸಿ.ರೋಡಿನ ಕೃಷ್ಣ ಹೆರಿಟೇಜ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಚಿನ್ನದ ಮಳಿಗೆ ಅಪೂರ್ವ ಜ್ಯುವೆಲರ್ಸ್ ಸದ್ದಿಲ್ಲದೆಯೇ ಎಂದಿನಂತೆ ತನ್ನ ಪ್ರಾಮಾಣಿಕ ಮತ್ತು ಪಾರದರ್ಶಕ ಸೇವೆಯೊಂದಿಗೆ ಕಾರ್ಯಾಚರಿಸುತಿದ್ದುದು ಕಂಡುಬಂತು.
ಯಾವುದೇ ಆಫರ್ ಗಳಿಗೆ ಮಾರು ಹೋಗದೆ, ಕುಟುಂಬ ಸದಸ್ಯರಂತೆಯೇ ನಗುಮೊಗದ ಸೇವೆ ನೀಡುವ ಅಪೂರ್ವ ಜ್ಯುವೆಲರ್ಸ್ ಅನ್ನೇ ಆಯ್ಕೆ ಮಾಡಿ ಆಗಮಿಸಿದ ಗ್ರಾಹಕರು, ತಮಗಿಷ್ಟವಾದ ವಿನ್ಯಾಸದ ಚಿನ್ನಾಭರಣಗಳನ್ನು ಖರೀದಿಸುವುದು, ಮಕ್ಕಳಿಗೆ ಕಿವಿ ಚುಚ್ಚಿಸಿಕೊಳ್ಳುವ ಶಾಸ್ತ್ರ ನೆರವೇರಿಸುವುದನ್ನು ಮಾಡುತ್ತಾ ತಮಗೆ ಬೇಕಾದ ಆಯ್ಕೆಯನ್ನು ಪಡೆದ ಸಂತಸದಲ್ಲಿ ಮರಳುತ್ತಿರುವುದು ಕಂಡುಬಂತು.
ಇದು ನಮ್ಮದೇ ಮಳಿಗೆ ಎಂಬ ಭಾವನೆ, ನಮಗಿಷ್ಟವಾದ ಆಭರಣ ಇಲ್ಲಿ ದೊರಕುತ್ತದೆ ಹಾಗೂ ಪ್ರಾಮಾಣಿಕ ಸೇವೆ ಲಭ್ಯವಾಗುತ್ತದೆ ಎಂಬ ವಿಶ್ವಾಸವನ್ನು ಗ್ರಾಹಕರು ಅಪೂರ್ವ ಜ್ಯುವೆಲರ್ಸ್ ನಿಂದ ಪಡೆದದ್ದಕ್ಕೆ ಸಾಕ್ಷಿಯಾಗಿ ಅಕ್ಷಯ ತೃತೀಯದಂತು ಮಳಿಗೆಯಲ್ಲಿ ಜನಸಂದಣಿ ಕಂಡುಬಂತು. ಗ್ರಾಹಕರಿಗೆ ಸಮಾಧಾನ ನೀಡುವ ಪ್ರಾಮಾಣಿಕ ಸೇವೆ ನೀಡುವುದು ಹಾಗೂ ಗುಣಮಟ್ಟದ ಆಭರಣವನ್ನು ಒದಗಿಸುವ ನಮ್ಮ ಆಶಯದ ಮೇಲೆ ಭರವಸೆ ಇಟ್ಟು ಗ್ರಾಹಕರು ಅಪೂರ್ವ ಜ್ಯುವೆಲರ್ಸ್ ಗೆ ಆಗಮಿಸಿದ್ದು, ಪೂರ್ಣ ಸಂತೃಪ್ತರಾಗಿ ಖರೀದಿ ನಡೆಸುತ್ತಿದ್ದಾರೆ. ಇಂದು ರಾತ್ರಿ 8.30ರವರೆಗೂ ಗ್ರಾಹಕರ ಸೇವೆಗೆ ನಮ್ಮ ಮಳಿಗೆ ತೆರೆದಿರುತ್ತದೆ ಎಂದು ಮಾಲೀಕ ಸುನೀಲ್ ಈ ಸಂದರ್ಭ ಪ್ರತಿಕ್ರಿಯಿಸಿದರು.
Be the first to comment on "ಬದುಕು ಬಂಗಾರವಾಗಲಿ, ಸುಖ ಸಮೃದ್ಧಿ ಅಕ್ಷಯವಾಗಲಿ"