ಒಡಿಶಾದಲ್ಲಿ FANI ಚಂಡಮಾರುತದ ಹಾವಳಿ ಭೀಕರವಾಗಿದ್ದು ಮೂವರು ಸಾವನ್ನಪ್ಪಿ ಹಲವರು ನಿರಾಶ್ರಿತರಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಒಡಿಶಾ ಕರಾವಳಿಯನ್ನು ಚಂಡಮಾರುತ ಪ್ರವೇಶಿಸುತ್ತಿದ್ದಂತೆ ಭುವನೇಶ್ವರದ ರೈಲ್ವೆ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಜನ್ಮ ನೀಡಿದ್ದ ಮಗುವಿಗೆ FANI ಎಂದು ನಾಮಕರಣ ಮಾಡಲಾಗಿದೆ.
ಒಡಿಶಾ ರಾಜಧಾನಿ ಭುವನೇಶ್ವರದಿಂದ ಐದು ಕಿಮೀ ದೂರದ ಮಂಚೇಶ್ವರ ರೈಲ್ವೆ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ 11.03ಕ್ಕೆಈ ಬೇಬಿ ಫೋನಿ ಜನಿಸಿದೆ. ಮಗುವಿನ ತಾಯಿ ರೈಲ್ವೆ ಇಲಾಖೆ ಸಿಬ್ಬಂದಿಯಾಗಿದ್ದಾರೆ. ಫೋನಿ ಚಂಡಮಾರುತ ಒಡಿಶಾದಲ್ಲಿ ಭಾರೀ ಹಾನಿಯುಂಟು ಮಾಡಿದ್ದು ಚಂಡಮಾರುತದಿಂದ ತೊಂದರೆಗೊಳಗಾದ ರಾಜ್ಯಗಳಿಗೆ ಕೇಂದ್ರವು ಸಾವಿರ ಕೋಟಿ ರು. ಪರಿಹಾರ ಬಿಡುಗಡೆ ಮಾಡಿದೆ.
Be the first to comment on "Baby FANI – ಚಂಡಮಾರುತ ವೇಳೆ ಜನಿಸಿದ ಹೆಣ್ಣುಮಗುವಿಗೆ ಈ ಹೆಸರು"