ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಬಯಕೆ: ಅನುಪಮಾ ಕಾಮತ್

ಬಂಟ್ವಾಳ: ನನ್ನ ತಾಯಿಯ ತಂದೆ ಇಸ್ರೋದಲ್ಲಿದ್ದವರು. ನನಗೂ ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಆಸೆ. ಪಿಸಿಎಂಬಿ ತೆಗೆದುಕೊಂಡು ಶಾರದಾ ವಿದ್ಯಾಲಯಲದಲ್ಲಿ ಪಿಯುಸಿ ವಿಜ್ಞಾನ ವಿಷಯ ಆಯ್ಕೆ ಮಾಡುವೆ. ಡಾಕ್ಟರ್ ಆಗುವ ಆಸಕ್ತಿ ಇಲ್ಲ ಎಂದಳು

ಜಾಹೀರಾತು

ಮಂಗಳವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಬಂಟ್ವಾಳ ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್ ಹೇಳಿದಳು. ಕೈಕುಂಜೆಯಲ್ಲಿ ಮನೆ ಮಾಡಿರುವ ವೈದ್ಯ ದಂಪತಿ ಡಾ. ದಿನೇಶ್ ಕಾಮತ್ ಮತ್ತು ಡಾ.ಅನುರಾಧಾ ಕಾಮತ್ ಅವರ ಪ್ರಥಮ ಪುತ್ರಿ ಅನುಪಮಾ ನೃತ್ಯ, ಸಂಗೀತಗಳನ್ನೂ ಕಲಿತಿದ್ದಾಳೆ. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದಾಳೆ.

ಸದ್ಯ ಮಂಗಳೂರಿನ ಸಿಎಫ್ ಎಎಲ್ ನಲ್ಲಿ ಐಐಟಿ ಕೋಚಿಂಗ್ ಪಡೆಯುತ್ತಿರುವ ಅನುಪಮಾ ಈ ಯಶಸ್ಸಿಗೆ ಬಂಟ್ವಾಳ ವಿದ್ಯಾಗಿರಿಯ ಶಿಕ್ಷಕ, ಶಿಕ್ಷಕೇತರ ವೃಂದಕ್ಕೆ ಕೃತಜ್ಞತೆ ಸಲ್ಲಿಸಿದಳು.

ಶಾಲೆಯಲ್ಲಿ ಕೊಡುವ ಕೋಚಿಂಗ್ ಅಷ್ಟೇ ನನಗೆ ಮಾರ್ಗದರ್ಶಿ. ನನ್ನ ಸಹಪಾಠಿಗಳೊಂದಿಗೆ ಗ್ರೂಪ್ ಸ್ಟಡಿ ಮಾಡ್ತಿದ್ದೆ. ನನ್ನೊಡನೆ ಗ್ರೂಪ್ ಸ್ಟಡಿ ಮಾಡುತ್ತಿದ್ದ ಎಲ್ಲರಿಗೂ ಉತ್ತಮ ಅಂಕ ಬಂದಿವೆ ಎಂದಳು. ಮಾರ್ಕ್ ಗಳಿಕೆಗೆಂದು ನಾವೆಂದೂ ಒತ್ತಡ ಹೇರಲಿಲ್ಲ. ಎಂಟು ಗಂಟೆ ನಿದ್ರೆ, ಓದುವ ಸಂದರ್ಭ ಶ್ರದ್ಧೆ, ಏಕಾಗ್ರತೆಯಲ್ಲಿ ಅಭ್ಯಸಿಸುತ್ತಿದ್ದ ಅನುಪಮಾ ಇಂದು ಉತ್ತಮ ಅಂಕ ಗಳಿಸಿರಲು ಆಕೆಯ ಶಾಲೆಯ ಎಲ್ಲ ಶಿಕ್ಷಕ ವೃಂದ ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹ ಕಾರಣ ಎಂದು ಆಕೆಯ ಹೆತ್ತವರು ತಿಳಿಸಿದರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಐಐಟಿಯಲ್ಲಿ ಕಲಿತು ಇಸ್ರೋದಲ್ಲಿ ವಿಜ್ಞಾನಿಯಾಗುವ ಬಯಕೆ: ಅನುಪಮಾ ಕಾಮತ್"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*