- ಕರಾವಳಿ ಕರ್ನಾಟಕದಲ್ಲೀಗ ಮೋಡ, ಮಳೆ ಬರುವ ಸಾಧ್ಯತೆ
ಭಾರತದ ದಕ್ಷಿಣ ಕರಾವಳಿ ಅದರಲ್ಲೂ ವಿಶೇಷವಾಗಿ ತಮಿಳುನಾಡು ಮತ್ತು ದಕ್ಷಿಣ ಆಂದ್ರದ ಭಾಗಗಳಿಗೆ ‘ಫಣಿ’ ಚಂಡಮಾರುತ ಮುಂದಿನ 72 ಗಂಟೆಗಳೊಳಗೆ ಅಪ್ಪಳಿಸುವ ಭೀತಿ ಇದೆ ಎಂದು ಹವಾಮಾನ ಇಲಾಖೆ ಟ್ವೀಟ್ಟರ್ ನಲ್ಲಿ ತಿಳಿಸಿದೆ. ಇದರ ಪರಿಣಾಮ ಈಗಾಗಲೇ ಕರಾವಳಿ ಕರ್ನಾಟಕದಲ್ಲಿ ಕಾಣಿಸುತ್ತಿದ್ದು, ದಟ್ಟ ಮೋಡದ ವಾತಾವರಣ ಕಂಡುಬಂದಿದೆ. ಮುಂದಿನ ನಾಲ್ಕೈದು ದಿನಗಳೊಳಗೆ ಮಳೆ ಸುರಿದರೆ ಅಚ್ಚರಿ ಇಲ್ಲ.
ಚಂಡಮಾರುತ ನೈಋತ್ಯ ಶ್ರೀಲಂಕಾ ಕರಾವಳಿ ದಾಟಿ ಏಪ್ರಿಲ್ 30ರಂದು ಸಂಜೆಯ ವೇಳೆಗೆ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಲಿದೆ’ ಎಂದು ಹವಾಮಾನ ಇಲಾಖೆ ಹೇಳಿದೆ. ಏಪ್ರಿಲ್ 29 ಮತ್ತು 30ರಂದು ಕೇರಳದಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಏಪ್ರಿಲ್ 30 ಮತ್ತು ಮೇ 1ರಂದು ಏಪ್ರಿಲ್ 29 ಮತ್ತು 30ರಂದು ಕೇರಳದಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ನಿರೀಕ್ಷೆಯಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಏಪ್ರಿಲ್ 30 ಮತ್ತು ಮೇ 1ರಂದು ಮಳೆಯಾಗುವ ಸಾಧ್ಯತೆಯಿದೆ. ಹಿಂದೂ ಮಹಾಸಾಗರ ಸೇರಿದಂತೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಅನ್ವಯ ಏಪ್ರಿಲ್ 29 ಮತ್ತು 30ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರಲಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಭಾರತದ ದಕ್ಷಿಣ ಕರಾವಳಿಗೆ FANI ಚಂಡಮಾರುತದ ಭೀತಿ"