ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ವತಿಯಿಂದ ಏಪ್ರಿಲ್ ೨೨ ರಿಂದ ೨೭ರ ವರೆಗೆ ಮಕ್ಕಳ ಬೇಸಿಗೆ ಶಿಬಿರ ವಿಕಸನ ಬಿ.ಸಿ.ರೋಡಿನಲ್ಲಿ ನಡೆಯಿತು.
ಜಯಲಕ್ಷ್ಮಿ ವಿ. ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಝಂಭಾ ವ್ಯಾಯಾಮ ತರಬೇತಿ, ಯೋಗಾಸನ, ಪ್ರಾಣಾಯಾಮ ತರಬೇತಿ, ಸ್ವಚ್ಚ ಪರಿಸರ ಮತ್ತು ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಪ್ರಾತ್ಯಕ್ಷಿಕೆ, ಚಿತ್ರಕಲೆ, ಕ್ರಾಪ್ಟ್ ತರಬೇತಿ, ಮುಖವಾಡ, ಗಾಳಿಪಟ ತಯಾರಿಕಾ ತರಬೇತಿ, ನಾಟಕ ರಂಗ ಕಲಾ ತರಬೇತಿ ಹೀಗೆ ಹಲವಾರು ತರಬೇತಿ ಕಾರ್ಯಕ್ರಮಗಳು ನಡೆದವು.
ರಮ್ಯಶ್ರೀ, ರಾಜಮಣಿ ರಾಮಕುಂಜ, ಮುರಳಿಕೃಷ್ಣ, ಮುರಳೀಧರ ಆಚಾರ್, ಮೂರ್ತಿ ದೇರಾಜೆ ಮುಂತಾದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ತರಬೇತಿ ನೀಡಿದರು.
೨೭ರಂದು ಶಿಬಿರದ ಸಮಾರೋಪ ಸಮಾರಂಭ ಮತ್ತು ಭೂ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕಿ ಸುಜಾತಾ ರವಿಶಂಕರ್ ಆಗಮಿಸಿದ್ದರು.
ಮರಗಿಡಗಳನ್ನು ಕಡೆಯದೇ ಹೊಸ ಹೊಸ ಗಿಡ ಮರಗಳನ್ನು ನೆಡುವುದರೊಂದಿಗೆ ತಮ್ಮ ಪರಿಸರವನ್ನು ಸ್ವಚ್ಚವಾಗಿರಿಸಲು ಮಕ್ಕಳಲ್ಲಿ ಈಗಿಂದಲೇ ಜ್ಞಾನವನ್ನು ತುಂಬಿದರೆ ಮುಂದೆ ಆಗುವಂತಹ ಅಪಾಯಕಾರಿ ಪರಿಣಾಮಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಕರೆ ನೀಡಿದರು. ಜೇಸಿ ಅಧ್ಯಕ್ಷ ಹರ್ಷರಾಜ್ ಸಿ ಅಧ್ಯಕ್ಷತೆ ವಹಿಸಿದ್ದರು. ಸುಮಾರು ೨೫ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದರು. ನಂತರ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಜೇಜೇಸಿ ಅಧ್ಯಕ್ಷ ರೊನಿತ್ ಬಿ.ಜಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು.
Be the first to comment on "ಜೋಡುಮಾರ್ಗ ನೇತ್ರಾವತಿ ಜೇಸಿಯಿಂದ ಮಕ್ಕಳ ಬೇಸಿಗೆ ಶಿಬಿರ"