
ರಾಜಾರಾಮ ವರ್ಮ ವಿಟ್ಲ
ವಿಟ್ಲ: ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸಾಹಿತಿ ರಾಜಾರಾಮ ವರ್ಮ ವಿಟ್ಲ, ಗೌರವಾಧ್ಯಕ್ಷರಾಗಿ ಸಾಹಿತಿ ವಿ. ಸುಬ್ರಹ್ಮಣ್ಯ ಭಟ್ ತುಂಬೆ ಹಾಗೂ ಕಾರ್ಯದರ್ಶಿಯಾಗಿ ಸುರೇಖಾ ಎಳವಾರ್ ಆಯ್ಕೆಯಾಗಿದ್ದಾರೆ.

ವಿ. ಸುಬ್ರಹ್ಮಣ್ಯ ಭಟ್
ಸದಸ್ಯರಾಗಿ ಮಹೇಶ್ ನೆಟ್ಲ, ಜ್ಯೋತಿ ರವಿರಾಜ್ ಹಾಗೂ ಸೀತಾಲಕ್ಷ್ಮೀ ವರ್ಮ ವಿಟ್ಲ ನೇಮಕವಾಗಿದ್ದು, ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಹಾಗೂ ಚುಟುಕು ಕವಿಗೋಷ್ಠಿ ಕಾರ್ಯಕ್ರಮವು ಮೇ 5ರಂದು ವಿಟ್ಲದ ವಿಠಲ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಲಿದೆ.

ಸುರೇಖಾ ಎಳವಾರ್
ಪೂರ್ವಾಹ್ನ 10ಕ್ಕೆ ನಡೆಯುವ ಪದಗ್ರಹಣ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಉದ್ಘಾಟಿಸುವರು. ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ವಿಶ್ರಾಂತ ಯೋಧ ಮತ್ತು ಚಲನಚಿತ್ರ ನಟ ತಾರಾನಾಥ ಬೋಳಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಹರೀಶ್ ಸುಲಾಯ ಒಡ್ಡಂಬೆಟ್ಟು ಉಪಸ್ಥಿತರಿರುವರು. ಬಳಿಕ ಸಾಹಿತಿ ಶಿವಕುಮಾರ ಸಾಯ ಅವರ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲಿದೆ ಎಂದು ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.


Be the first to comment on "ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್: ಮೇ 5ರಂದು ಪದಗ್ರಹಣ, ಚುಟುಕು ಕವಿಗೋಷ್ಠಿ"