ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಗ್ರಾಮದಲ್ಲಿ ಏ.4ರಂದು ರಾತ್ರಿ ಭಾರಿ ಸಿಡಿಲಿನಿಂದ ವಿದ್ಯುತ್ ಪ್ರವಹಿಸಿ ಸಂಜೀವ ಮೂಲ್ಯ ಮತ್ತು ಅವರ ಪತ್ನಿ ಸರೋಜಿನಿ ಮೃತಪಟ್ಟಿದ್ದಾರೆ.

ಈ ಸಂದರ್ಭ ಅವರ ಮಗಳು ಹೊರಜಗಲಿಯಲ್ಲಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಸರೋಜಿನಿ ಅವರ ಮನೆಯಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದಕ್ಕಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಪ್ಯೂಜ್ ತೆಗೆಯಲು ಮುಂದಾಗಿದ್ದಾರೆ. ಆಗ ಅವರಿಗೆ ವಿದ್ಯುತ್ ಆಘಾತವಾಗಿದೆ, ಪತ್ನಿ ಕಿರುಚಿಕೊಳ್ಳುತ್ತಿರುವುದನ್ನು ಕಂಡ ಪತಿ ಸಂಜೀವ ಅವರನ್ನು ರಕ್ಷಿಸಲು ಮುಂದಾದಾಗ ಅವರಿಗೆ ಸಹ ವಿದ್ಯುತ್ ಶಾಕ್ ತಗುಲಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127


Be the first to comment on "ಸಿಡಿಲಾಘಾತ ಸಂದರ್ಭ ವಿದ್ಯುತ್ ಶಾಕ್: ದಂಪತಿ ಸಾವು"