ಆಯುರ್ವೇದ ವೈದ್ಯರಿಗೆ ಮಾಹಿತಿ ಕಾರ್ಯಕ್ರಮ ಬಿ,ಸಿ.ರೋಡಿನ ಹೋಟೆಲ್ ರಂಗೋಲಿಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಆಯುರ್ವೇದ ಔಷಧಗಳ ಪಾತ್ರ ಎಂಬ ವಿಚಾರವಾಗಿ ಆಯುರ್ವೇದ ವೈದ್ಯರಿಗೆ ಮಾಹಿತಿ ಕಾರ್ಯಕ್ರಮ ಗೋಪಾಕೃಷ್ಣ ಆಯುರ್ವೇದ ಔಷಧಾಲಯ ವತಿಯಿಂದ ನಡೆಯಿತು. ಹಿರಿಯ ವೈದ್ಯ ಡಾ.ಶ್ಯಾಮ್ ಭಟ್ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿ ಗೋವಾದ ವೈದ್ಯರಾದ ಡಾ.ಉಪೇಂದ್ರ ದೀಕ್ಷಿತ್ ಅನೇಕ ತುರ್ತು ಚಿಕಿತ್ಸೆಗೆ ಬೇಕಾಗಿರುವ ಖಾಯಿಲೆಗಳಲ್ಲಿ ಉಪಯೋಗಿಸಲ್ಪಡುವ ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ವೈದ್ಯರಾದ ಡಾ.ನಿರಂಜನ ಆಚಾರ್ಯ ಸ್ವಾಗತಿಸಿದರು. ಡಾ ಶಿವಪ್ರಸಾದ್ ಶೆಟ್ಟಿ ವಂದಿಸಿ , ಡಾ ವಿಶ್ವನಾಥ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಬಂಟ್ವಾಳ ಮಂಗಳೂರು ಉಡುಪಿ ಹಾಗೂ ಪುತ್ತೂರು ನಿಂದ ಅನೇಕ ವೈದ್ಯರುಗಳು ಭಾಗವಹಿಸಿ ಪ್ರಯೋಜನ ಪಡೆದರು.
Be the first to comment on "ಆಯುರ್ವೇದ ವೈದ್ಯರಿಗೆ ಮಾಹಿತಿ ಕಾರ್ಯಕ್ರಮ"