ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಅನ್ನಪ್ರಸಾದದಲ್ಲಿ ಟೈಗರ್ ಬ್ರಾಂಡ್ ಬೆಳ್ತಿಗೆ ಅಕ್ಕಿಯನ್ನು ಉಪಯೋಗಿಸುವುದರಿಂದ ಶ್ರೀ ಕ್ಷೇತ್ರದ ಸೂಚನೆಯಂತೆ ಇದೇ ಬೆಳ್ತಿಗೆ ಅಕ್ಕಿಯನ್ನು ನೀಡಿ ಸಹಕರಿಸಬೇಕು ಎಂದು ಹೊರೆಕಾಣಿಕೆ ಸಮಿತಿಯ ಸಂಚಾಲಕ ಚಂದ್ರಹಾಸ ಡಿ.ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡಿನಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಅದೇ ಬ್ರಾಂಡ್ ಅಕ್ಕಿ ಸಂಗ್ರಹಣೆ ಕಷ್ಟವಾದರೆ, ಹೊರೆಕಾಣಿಕೆ ಸಮಿತಿಯೇ ಖರೀದಿಸುತ್ತದೆ, 10, 25, 50, 100 ಕೆಜಿ ಅಕ್ಕಿಗೆ ತಲಾ 430, 1075, 2150, 4300 ರೂಗಳನ್ನು ಫೆ.20ನೇ ಬುಧವಾರದಿಂದ ಬಿ.ಸಿ.ರೋಡಿನ ಹೋಟೆಲ್ ರಂಗೋಲಿಯ ಹೊರೆಕಾಣಿಕೆ ಕೌಂಟರ್ ನಲ್ಲಿ ನೀಡಿ ರಶೀದಿ ಪಡೆಯಬಹುದು ಎಂದರು.
ಹೊರೆಕಾಣಿಕೆಯಲ್ಲಿ ನೀಡಬಹುದಾದ ವಸ್ತುಗಳು: ಬೆಳ್ತಿಗೆ ಅಕ್ಕಿ (ಟೈಗರ್ ಬ್ರಾಂಡ್), ಸಕ್ಕರೆ, ಹೆಸರುಬೇಳೆ, ಕಡ್ಲೆಬೇಳೆ, ಮೆಣಸು, ದಿನಸಿ ಸಾಮಾನು, ತೆಂಗಿನಕಾಯಿ, ಸುವರ್ಣಗಡ್ಡೆ, ಕುಂಬಳ, ಸಿಹಿಕುಂಬಳ, ಸೌತೆ, ಬದನೆ, ಬಾಳೆ ಎಲೆ, ಸೀಯಾಳ ಇತ್ಯಾದಿ.
Be the first to comment on "ಪೊಳಲಿ ಹೊರೆಕಾಣಿಕೆ: ಸೂಚನೆ"