ಪೆರುವಾಯಿಂದ ಮನೆಗೆ ನಡೆದು ಬರುತ್ತಿದ್ದ ಸಮಯ ಪೆರುವಾಯಿ ಗ್ರಾಮದ ಮುಚ್ಚಿರಪದವು ನಿವಾಸಿಗಳಾದ ನಾರಾಯಣ ಪೂಜಾರಿ, ಚಂದ್ರಾವತಿ, ಮಕ್ಕಳಾದ ಅವಿನಾಶ್, ಯಶವಂತ ಅವರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಿಂದ ಗಾಯಗೊಂಡವರಾಗಿದ್ದಾರೆ. ನಾರಾಯಣ ಪೂಜಾರಿ ಅವರು ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದು, ಬಡ ಕುಟುಂಬಕ್ಕೆ ಈ ಅಪಘಾತದಿಂದ ಆಸ್ಪತ್ರೆ ಚಿಕಿತ್ಸೆಗೆ ಹಣ ಹೊಂದಾಣಿಕೆ ಮಾಡಲು ಪರದಾಡುವಂತಾಗಿದೆ.
ಸದ್ಯ ಚಂದ್ರಾವತಿ ಹಾಗೂ 4 ನೇ ತರಗತಿಯ ಯಶವಂತ ಅವರು ಮಂಗಳೂರು ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ದಾನಿಗಳ ಸಹಾಯ ಬೇಕಾಗಿದೆ. ದಾನಿಗಳು ಯಶವಂತ ಅವರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್ ಮಾಣಿಲ ಶಾಖೆಯ ಉಳಿತಾಯ ಖಾತೆ ಸಂಖ್ಯೆ 5022500100482601 ಗೆ ಹಣವನ್ನು ಜಮಾ ಮಾಡವಹುದಾಗಿದೆ. 9902636584 ನಂಬರ್ ಅನ್ನು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದಾಗಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಅಪಘಾತದಲ್ಲಿ ಗಂಭೀರ ಗಾಯ- ನೆರವಿಗೆ ಮೊರೆ"
Be the first to comment on "ಅಪಘಾತದಲ್ಲಿ ಗಂಭೀರ ಗಾಯ- ನೆರವಿಗೆ ಮೊರೆ"