ಫರಂಗಿಪೇಟೆ ಸೇವಾಂಜಲಿಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಪ್ರಸ್ತುತಿ ಎಂಬ ಗೋಷ್ಠಿ ಏರ್ಪಡಿಸಲಾಗಿದೆ.
ಜಾಹೀರಾತು
ಇದರಲ್ಲಿ ಭಾಗವಹಿಸಲು ಇಚ್ಛಿಸುವ ಬಂಟ್ವಾಳ ತಾಲೂಕಿನ ಹಿರಿ-ಕಿರಿಯ ಆಸಕ್ತ ಕವಿ-ಸಾಹಿತಿಗಳು ತಮ್ಮ ಸ್ವರಚಿತ ಕಥೆ, ಕವನ, ಚುಟುಕು/ಹನಿಕವನ ಇತ್ಯಾದಿ ಸಾಹಿತ್ಯ ಪ್ರಕಾರ ಗಳನ್ನು ಕಳುಹಿಸಿ ಕೊಡಲು ಕೋರಲಾಗಿದೆ.
ತಾವು ಕಳುಹಿಸುವ ಗದ್ಯ ಬರೆಹ ಎರಡು ಪುಟಗಳ ಮಿತಿಯಲ್ಲಿರಲಿ. ಕವನ/ಭಾವಗೀತೆಗಳಾದರೆ ಒಂದು ಪುಟದ ಒಳಗಿರಬೇಕು. ನಾಲ್ಕರಿಂದ ಆರು ಸಾಲುಗಳ ಚುಟುಕು ಅಥವಾ ಹನಿಕವನಗಳನ್ನು ಕಳುಹಿಸಿ ಕೊಡಬಹುದು. ಆಯ್ಕೆ ಯಾದ ರಚನೆಗಳನ್ನು ಸಾಹಿತ್ಯ ಪ್ರಸ್ತುತಿ ಗೋಷ್ಠಿ ಯಲ್ಲಿ ವಾಚಿಸಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಪ್ರಕಾರದ ರಚನೆ ಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಸ್ಫುಟವಾಗಿ ಬರೆದು ತಮ್ಮ ದೂರವಾಣಿ ಸಂಖ್ಯೆ ಹಾಗು ವಿಳಾಸದೊಂದಿಗೆ ಅಕ್ಟೋಬರ್ 28 ರೊಳಗೆ ಕಳುಹಿಸಿ ಕೊಡಬೇಕು… ವಿಳಾಸ: ಅಧ್ಯಕ್ಷ ರು/ಕಾರ್ಯ ದರ್ಶಿ,ಸ್ವಾಗತ ಸಮಿತಿ, ಬಂಟ್ವಾಳ ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನ, ತುಂಬೆ ಪದವಿ ಪೂರ್ವ ಕಾಲೇಜು, ತುಂಬೆ-574143 ,ಬಂಟ್ವಾಳ ದ.ಕ .ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9483903306 ಸಂಪರ್ಕಿಸಬಹುದು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ತಾಲೂಕು ಸಾಹಿತ್ಯ ಸಮ್ಮೇಳನ: ಕವನ, ಬರೆಹಗಳಿಗೆ ಆಹ್ವಾನ"
Be the first to comment on "ತಾಲೂಕು ಸಾಹಿತ್ಯ ಸಮ್ಮೇಳನ: ಕವನ, ಬರೆಹಗಳಿಗೆ ಆಹ್ವಾನ"