https://www.youtube.com/watch?v=zISoDaXPiRo
ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ್ ಸಮಾಜದವರು ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ವಾಸಿಸುತ್ತಿದ್ದು, ಸಮಾಜದ ಮಕ್ಕಳಿಗೆ ಶಾಲಾ ದಾಖಲಾತಿ, ವಿದ್ಯಾರ್ಥಿ ವೇತನ ವಿತರಣೆ ಸಂದರ್ಭ ಜಾತಿ ಪ್ರಮಾಣಪತ್ರವನ್ನು ತರಬೇಕು ಎಂದು ಹೇಳುವುದು ತಮ್ಮ ಗಮನಕ್ಕೆ ಬಂದಿದೆ. ಮೀಸಲಾತಿಯೇ ಇಲ್ಲದಿರುವಾಗ ಸಾಮಾನ್ಯ ವರ್ಗಕ್ಕೆ ಜಾತಿ ಪ್ರಮಾಣಪತ್ರ ಕೊಡುವ ಅಗತ್ಯ ಇಲ್ಲವಾಗಿದ್ದು ಈ ಕುರಿತು ಸರಕಾರ ಗಮನಹರಿಸಬೇಕು ಎಂದು ಕುಡಾ ದೇಶಸ್ಥ ಗೌಡ್ ಬ್ರಾಹ್ಮಣ ಸಂಘ ಜಿಲ್ಲಾ ಸಮಿತಿ ಹೇಳಿದೆ.
ಬಂಟ್ವಾಳ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಡೆಚ್ಚ ಗಣಪತಿ ಶೆಣೈ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಮಾಜ ಬಾಂಧವರು ಅನಗತ್ಯ ಗೊಂದಲಕ್ಕೆ ಈಡಾಗಬಾರದು, ಮೀಸಲಾತಿಯೇ ಇಲ್ಲದಿರುವಾಗ ಸಾಮಾನ್ಯ ವರ್ಗಕ್ಕೆ ಜಾತಿ ಪ್ರಮಾಣಪತ್ರ ಕೊಡುವ ನಿಮಯ ಇಲ್ಲವೆಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಜಾತಿ ಕಲಂನಲ್ಲಿ ಕುಡಾಲ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಾಮಾನ್ಯ ವರ್ಗ ಎಂದು ನಮೂದಿಸಬೇಕು ಎಂದು ಅವರು ಸಮಾಜ ಬಾಂಧವರಿಗೆ ಮನವಿ ಮಾಡಿದರು.
ಕಾರ್ಯದರ್ಶಿ ಪೂರ್ಲಿಪ್ಪಾಡಿ ವೆಂಕಟ್ರಾಯ ಪ್ರಭು, ಪ್ರಮುಖರಾದ ಮುರಳೀಧರ ಪ್ರಭು ವಗ್ಗ, ಪ್ರಭಾಕರ ಪ್ರಭು, ಜಗದೀಶ ಶೆಣೈ, ರಾಮಗಣೇಶ ಪ್ರಭು ಕೈಕುಂಜೆ, ಶಿವರಾವ್ ನಾಯಕ್ ನೆಕ್ಕಿಲಾರು, ಜಯಪಾಲ ಪ್ರಭು ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment on "ಮೀಸಲಾತಿಯೇ ಇಲ್ಲದಿರುವಾಗ ಜಾತಿ ಪ್ರಮಾಣಪತ್ರ ಯಾಕೆ?"