www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮತ ಎಣಿಕೆ ಕುತೂಹಲದ ಘಟ್ಟಕ್ಕೆ ತಲುಪಿದ್ದು, ಪ್ರಕಟಿತ 23 ಫಲಿತಾಂಶಗಳ ಪೈಕಿ 9 ಬಿಜೆಪಿ, 9 ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ. 4 ಸ್ಥಾನಗಳಲ್ಲಿ ಜಯ ಗಳಿಸಿದೆ.
ಕಾಂಗ್ರೆಸ್ ವಿಜಯಿಗಳು 9: ವಾಸು ಪೂಜಾರಿ (ವಾರ್ಡ್ 1), ಗಂಗಾಧರ ಪೂಜಾರಿ (ವಾರ್ಡ್ 2), ಜನಾರ್ದನ ಚಂಡ್ತಿಮಾರ್ (ವಾರ್ಡ್ 5), ಮೊಹಮ್ಮದ್ ನಂದರಬೆಟ್ಟು (ವಾರ್ಡ್ 16), ಲೋಕಾಕ್ಷ (20ನೇ ವಾರ್ಡ್), ರಾಮಕೃಷ್ಣ ಆಳ್ವ (ವಾರ್ಡ್ 21), ಸಿದ್ದಿಕ್ (ವಾರ್ಡ್ 24), ಜೆಸಿಂತಾ (ವಾರ್ಡ್ 25), ವಾರ್ಡ್ 17ರಲ್ಲಿ ಲುಕ್ಮಾನ್
ಬಿಜೆಪಿಯ ವಿಜಯಿಗಳು: 9
ರೇಖಾ ಪೈ(ವಾರ್ಡ್ 4), ದೇವಕಿ (ವಾರ್ಡ್ 6), ಶಶಿಕಲಾ (ವಾರ್ಡ್ 7), ಹರಿಪ್ರಸಾದ್ (ವಾರ್ಡ್ 9), ಶೋಭಾ ಹರಿಶ್ಚಂದ್ರ (ವಾರ್ಡ್ 10), ಜಯಂತಿ ಕುಲಾಲ್ (ವಾರ್ಡ್ 11), ವಿದ್ಯಾವತಿ (ವಾರ್ಡ್ 12), ಗೋವಿಂದ ಪ್ರಭು (ವಾರ್ಡ್ 15), ಚೈತನ್ಯಾ (ವಾರ್ಡ್ 22)
ಎಸ್.ಡಿ.ಪಿ.ಐ. ವಿಜೇತರು: 4
ಮೊಹಮ್ಮದ್ ಇದ್ರಿಸ್ (ವಾರ್ಡ್ 23), ಸಂಶದ್ (ವಾರ್ಡ್ 13), ಜೀನತ್ (ವಾರ್ಡ್ 14), ಮೊನೀಶ್ ಆಲಿ (ವಾರ್ಡ್ 8)
ಇವರ ಪೈಕಿ ಗೋವಿಂದ ಪ್ರಭು ಸತತ ಏಳನೇ ಬಾರಿ ಜಯ ಗಳಿಸಿದ್ದರೆ, ಮಾಜಿ ಅಧ್ಯಕ್ಷರಾದ ರಾಮಕೃಷ್ಣ ಆಳ್ವ ಗೆಲುವು ಸಾಧಿಸುವಲ್ಲಿ ಸಫಲರಾಗಿದ್ದಾರೆ. ಮಾಜಿ ಉಪಾಧ್ಯಕ್ಷ ಮೊಹಮ್ಮದ್ ನಂದರಬೆಟ್ಟು 4 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಬಿಜೆಪಿಯ ಪ್ರಮುಖರಾದ ದಿನೇಶ್ ಭಂಡಾರಿ, ಸುಗುಣ ಎ.ಕಿಣಿ ಸೋಲನುಭವಿಸಿದ್ದಾರೆ.
Be the first to comment on "ನಿರ್ಣಾಯಕ ಹಂತದಲ್ಲಿ ಬಂಟ್ವಾಳ ಪುರಸಭೆ ರಿಸಲ್ಟ್: ಕಾಂಗ್ರೆಸ್, ಬಿಜೆಪಿ ತಲಾ 9, ಎಸ್ ಡಿಪಿಐ 4"