ಬಂಟ್ವಾಳ ಪುರಸಭೆಯ ಇತಿಹಾಸವನ್ನು ಗಮನಿಸಿದರೆ ಬಿಜೆಪಿ ಇದೇ ಮೊದಲ ಬಾರಿಗೆ ಹೆಚ್ಚಿನ ಸ್ಥಾನವನ್ನು ಗಳಿಸಿದೆ. ವಾರ್ಡುವಾರು ವಿಂಗಡಣೆಯ ಬಳಿಕ ಇಷ್ಟು ಸ್ಥಾನ ಗಳಿಸಿದ್ದು ಉತ್ತಮ ಸಾಧನೆ ಎಂದು ವಿಶ್ಲೇಷಿಸುತ್ತಾರೆ ಪಕ್ಷದ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ.
1996ರಲ್ಲಿ 8, 2001ರಲ್ಲಿ 9 ಸ್ಥಾನ ಗಳಿಸಿದ್ದ ಬಿಜೆಪಿ, 2007ರಲ್ಲಿ 10 ಸ್ಥಾನ ಗಳಿಸಿತ್ತು. ಆಗ ಎಂಎಲ್. ಎ ಬಿಜೆಪಿಯವರಾಗಿದ್ದ ಕಾರಣ ಪುರಸಭೆಯ ಅಧಿಕಾರದ ಗದ್ದುಗೆ ಏರಿತ್ತು. 2013ರಲ್ಲಿ ಸೋಲು ಕಂಡ ಬಿಜೆಪಿ ಸ್ಥಾನದಲ್ಲೂ ಕುಸಿತ ಕಂಡಿತು. ಕೇವಲ 5 ಸ್ಥಾನಗಳಿಸಿದ್ದ ಬಿಜೆಪಿ ಮತ್ತೆ 2018ರ ಚುನಾವಣೆಯಲ್ಲಿ 11 ಸ್ಥಾನಗಳನ್ನುಗೆಲ್ಲುವ ಮೂಲಕ ಸಾಧನೆ ತೋರಿದೆ ಎನ್ನುತ್ತಾರೆ ಶೆಟ್ಟಿ.
2007ರಲ್ಲಿ 10 ಸ್ಥಾನ ಗಳಿಸಿದ್ದ ಬಿಜೆಪಿ ಪುರಸಭೆಯಲ್ಲಿ ಅಧಿಕಾರ ಪಡೆದಿತ್ತು. ಆಗ ಬಿಜೆಪಿ ಎಂಎಲ್ ಎ ಇದ್ದರು. ಇದೀಗ 11 ಸ್ಥಾನ ಗಳಿಸುವ ಮೂಲಕ ಅಧಿಕಾರ ಪಡೆಯುವುದೇ ಎಂಬುದನ್ನು ಕಾಲ ನಿರ್ಧರಿಸಬೇಕು. ಏಕೆಂದರೆ ಈಗಲೂ ಬಿಜೆಪಿ ಎಂಎಲ್ ಎ ಇದ್ದಾರೆ. ಹಾಗೂ ಸಂಸದರೂ ಬಿಜೆಪಿಯವರು.
Be the first to comment on "ಬಿಜೆಪಿಗೆ ಇದೇ ಮೊದಲ ಬಾರಿಗೆ 11 ಸ್ಥಾನ"