ಮಾಹಿತಿ

ಪುರಸಭೆ ಫಲಿತಾಂಶ: ದಿನವಿಡೀ ಬಂಟ್ವಾಳ ನ್ಯೂಸ್ ಕ್ಲಿಕ್ ಮಾಡಿ ನಿಖರ ಮಾಹಿತಿ ಪಡೆದ ಕುತೂಹಲಿಗರು

www.bantwalnews.com ಸಂಪಾದಕ: ಹರೀಶ ಮಾಂಬಾಡಿ

ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಬಂಟ್ವಾಳ ಪುರಸಭೆಯ ಫಲಿತಾಂಶದ ವಿವರಗಳನ್ನು ಬಂಟ್ವಾಳ ನ್ಯೂಸ್ ನಿಖರ ಲೆಕ್ಕಾಚಾರ, ವಿಶ್ಲೇಷಣೆಗಳೊಂದಿಗೆ ನಿಮ್ಮ ಮುಂದಿಟ್ಟಿದೆ. ಇದಕ್ಕೆ ಓದುಗರ ಸ್ಪಂದನೆಯೂ ಅಭೂತಪೂರ್ವ. ಸಂಜೆ 5 ಗಂಟೆಯ ವೇಳೆಗೆ 10,000ಕ್ಕೂ ಅಧಿಕ ಓದುಗರು www.bantwalnews.com ಕ್ಲಿಕ್ ಮಾಡಿದ್ದಾರೆ. ಬಂಟ್ವಾಳನ್ಯೂಸ್ ನ ಫೇಸ್ ಬುಕ್, ಟ್ವಿಟ್ಟರ್ ಮತ್ತು ಸಾಮಾಜಿಕ ಜಾಲತಾಣಗಳ ಲಿಂಕ್ ಗಳ ಮೂಲಕ ಈವರೆಗಿನ ಸುದ್ದಿಗಳು, ಸುದ್ದಿವಿಶ್ಲೇಷಣೆಗಳನ್ನು ಗಮನಿಸಿದ್ದಾರೆ. ಸಾಮಾನ್ಯವಾಗಿ ಬಂಟ್ವಾಳಕ್ಕೆ ಸಂಬಂಧಿಸಿದ ಓದುಗರು ಯಾವ ಸುದ್ದಿಗಳನ್ನು ಓದಿದರೂ ಖಚಿತತೆಗಾಗಿ ಬಂಟ್ವಾಳನ್ಯೂಸ್ ಕ್ಲಿಕ್ ಮಾಡುವುದು ವೆಬ್ ಪತ್ರಿಕೆಗೆ ಸಂದ ಗೌರವ.

ಜಾಹೀರಾತು

ಬಂಟ್ವಾಳ ತಾಲೂಕಿನ ದೈನಂದಿನ ಸುದ್ದಿ ನೀಡುವ ಮೊತ್ತಮೊದಲ ಜಾಲತಾಣವಾಗಿ ನಮ್ಮೂರ ವಿಚಾರಗಳನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು www.bantwalnews.com ಮೂಲಕ 2016, ನವೆಂಬರ್ 10ರಂದು ಆರಂಭಿಸಲಾಗಿತ್ತು. ನಾಡಿದ್ದು ನವೆಂಬರ್ ತಲುಪಿದರೆ ವೆಬ್ ಗೆ 2 ವರ್ಷ. ಇದಕ್ಕೆ ನಿಮ್ಮ ಸಹಕಾರವೇ ಕಾರಣ.

ಸಾಮಾನ್ಯವಾಗಿ ವೆಬ್ ಪತ್ರಿಕೆಗಳು ಘಟನೆ ನಡೆದ ತಕ್ಷಣ ಬ್ರೇಕಿಂಗ್ ನ್ಯೂಸ್ ಬಿತ್ತರಿಸುತ್ತವೆ. ಇದು ಅಪರಿಪೂರ್ಣವಾಗಿರುತ್ತದೆ ಎಂಬ ಧ್ವನಿಗಳನ್ನು ನಾವು ಗೌರವಿಸುತ್ತೇವೆ. ಹೀಗಾಗಿ ಬಂಟ್ವಾಳನ್ಯೂಸ್ ಬ್ರೇಕಿಂಗ್ ನ್ಯೂಸ್ ಗಾಗಿ ಆತುರಪಟ್ಟು ಸುದ್ದಿಯನ್ನು ಒದಗಿಸುವುದಿಲ್ಲ. ಸುದ್ದಿಯ ಖಚಿತತೆ ಲಭ್ಯವಾದ ಬಳಿಕವಷ್ಟೇ ಪ್ರಕಟಿಸಲಾಗುತ್ತದೆ. ಚುನಾವಣೆ ಫಲಿತಾಂಶದ 10 ಸುದ್ದಿಗಳೂ ಅಧಿಕೃತ ಮಾಹಿತಿ ಪಡೆದ ಬಳಿಕವಷ್ಟೇ ಪ್ರಕಟಗೊಂಡಿವೆ. ಯಾವುದೇ ಆತುರ, ಸ್ಪರ್ಧೆಯೂ ನಮಗಿಲ್ಲ.

ಜಗತ್ತಿನೆಲ್ಲೆಡೆ ಇರುವ ಬಂಟ್ವಾಳ ತಾಲೂಕಿನ ಬಾಂಧವರು ಒಂದೇ ಕ್ಲಿಕ್ ಮೂಲಕ ನಮ್ಮಲ್ಲೇನಾಗುತ್ತಿದೆ ಎಂದು ಅರಿತುಕೊಳ್ಳಲು ಸಹಾಯ ಮಾಡುವುದು, ಯಾವುದೇ ಪೂರ್ವಾಗ್ರಹವಿಲ್ಲದ ಮಾಹಿತಿ ಕೊಡುವುದು ಈ ವೆಬ್ ಪತ್ರಿಕೆಯ ಉದ್ದೇಶ. ಹೀಗಾಗಿ ಇದುವರೆಗೆ 8 ಲಕ್ಷಕ್ಕೂ ಮಂದಿ ವೆಬ್ ಸುದ್ದಿಗಳನ್ನು ಓದಿದ್ದಾರೆ, 1.5 ಲಕ್ಷ ನಮ್ಮ ಯೂಟ್ಯೂಬ್ ಮಾಹಿತಿ ವೀಕ್ಷಿಸಿದ್ದಾರೆ. ಪುಟ್ಟ ಹೆಜ್ಜೆಗಳನ್ನು ಇಡುತ್ತಾ ನಾವೂ ಮುಂದೆ ಸಾಗುತ್ತೇವೆ. ಯಾವುದೇ ಸದ್ದು ಗದ್ದಲಗಳಿಲ್ಲದೆ, ಓದುಗರ ನಡುವೆ.

ಜಾಹೀರಾತು

ಚುನಾವಣೆಗೆ ಸಂಬಂಧಿಸಿದ ಸುದ್ದಿಗಳ ಲಿಂಕ್ ಗಳು ಇಲ್ಲಿವೆ.

ಜಾಹೀರಾತು

ಒಳಗೆ ಕೌಂಟ್ ಡೌನ್, ಹೊರಗೆ ಸೆಕ್ಷನ್ ಜೊತೆ ಟೆನ್ಶನ್!!

ಜಾಹೀರಾತು
ಜಾಹೀರಾತು

8 ಗಂಟೆಗೆ ಆರಂಭ, 11.30ಕ್ಕೆ ಪ್ರಮಾಣಪತ್ರ

ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಗೆ ಬಿಜೆಪಿಗಿಂತ ಒಂದು ಸೀಟ್ ಜಾಸ್ತಿ ಗಳಿಸಿದ ಹೆಗ್ಗಳಿಕೆ

ಜಾಹೀರಾತು
ಜಾಹೀರಾತು

ಬಿಜೆಪಿಗೆ ಇದೇ ಮೊದಲ ಬಾರಿಗೆ 11 ಸ್ಥಾನ

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ