ಮಂಗಳೂರಿನ ಬಿಜೈ ಚರ್ಚ್ ರೋಡ್ ಬಳಿ ಇರುವ ಪಿಯೋ ಮಾಲ್ (PIO MALL)ನಲ್ಲಿ ಇರುವ ಸಚಿನ್ ಕರ್ಕೇರಾ ಅವರ ಕಾಮಧೇನು ಕೆಫೆ ಹಲವು ಕಾರಣಗಳಿಂದ ಗಮನ ಸೆಳೆಯುತ್ತಿದೆ.
ಇದರ ಮಾಲೀಕ ಸಚಿನ್ ಕರ್ಕೇರ ಅವರು ತಮ್ಮ ಕಲ್ಪನೆಯಡಿ ನಿರ್ಮಿಸಿದ ಕೆಫೆ ಭಿನ್ನ ವಿನ್ಯಾಸದಿಂದ ಕಂಡುಬಂದರೆ, ಇಲ್ಲಿ ಒದಗಿಸುತ್ತಿರುವ ಕಾಫಿ ಮತ್ತು ಉಪಾಹಾರದ ಜೊತೆ ಗೋಡೆ ಬರೆಹಗಳು ಜೀವನದ ಕಟುಸತ್ಯವನ್ನು ಹೇಳುತ್ತವೆ.
ಮಹಿಳಾ ಸಮಾನತೆ ಕುರಿತು ಬರೆದ ಸಾಲುಗಳು ಹೀಗಿವೆ ನೋಡಿ women don’t hate cooking. They hate how it was forced on them as a duty. Not offered as a choice. Cooking should be a life skill not a gender role for both men and women. !!.
ಗಲ್ಫ್ ದೇಶದಲ್ಲಿ ಉದ್ಯೋಗಿಯಾಗಿ ಬಳಿಕ ಊರಿಗೆ ಮರಳಿದ ಸಚಿನ್ ಕರ್ಕೇರ ಹಲವು ಉದ್ಯೋಗಗಳನ್ನು ಮಾಡಿದ ನಂತರ ಕೊಡಿಯಾಲ್ ಬೈಲ್ ನ ಈ ಜಾಗದಲ್ಲಿ ಸಣ್ಣ ಕ್ಯಾಂಟೀನ್ ಆರಂಭಿಸಿ ಕಾಮಧೇನು ಎಂಬ ಹೆಸರಿಟ್ಟರು. ಕೇಳಿದ್ದನ್ನು ಕೊಡುವ ಧೇನು ಅಂದರೆ ಕಾಮಧೇನು. ಹಾಗೆಯೇ ಸಣ್ಣ ಕೆಫೆ ಎರಡೇ ವರ್ಷದಲ್ಲಿ ಜನಪ್ರಿಯವಾಗಲು ಕಾರಣ ಅವರು ನೀಡುತ್ತಿದ್ದ ಸೇವೆ. ತೀರಾ ಅಗತ್ಯವುಳ್ಳವರಿಗೆ ಉಚಿತವಾಗಿ ಆಹಾರ ಒದಗಿಸುವ ಅವರು, ತನ್ನ ಕೆಫೆಯಲ್ಲೂ ಗುಣಮಟ್ಟದ ಆಹಾರ ನೀಡುವುದಕ್ಕೇ ಆದ್ಯತೆ ನೀಡುತ್ತಾರೆ. ಚಿಕ್ಕಮಗಳೂರಿನಿಂದ ತರಿಸಿದ ಉತ್ತಮ ಗುಣಮಟ್ಟದ ಕಾಫಿ ಹುಡಿಯಿಂದ ಮಾಡಿದ ಕಾಫಿ ಜೊತೆಗೆ ಅಲ್ಲಿನ ಪ್ರಶಾಂತ ಪರಿಸರವನ್ನೇ ನೆನಪಿಸುವ ಕಾಮಧೇನು ಕೆಫೆ ಮಂಗಳೂರಿನ ಮಟ್ಟಿಗೆ ಒಂದು ಭಿನ್ನ ಪ್ರಯತ್ನ… ಹ್ಯಾಟ್ಸಾಪ್ ಸಚಿನ್ ಕರ್ಕೇರ..
| ಮಂಗಳೂರಿನಲ್ಲಿ ಡಿಸೇಬಲಿಟಿ ಎನ್.ಜಿ.ಒ. ಅಲೆಯನ್ಸ್ ಕರಾವಳಿ ಧ್ವನಿ ಕಾರ್ಯಕ್ರಮ ಉದ್ಘಾಟನೆ (more…)