Rangapravesha - Shraddha Shramya
ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸೆ.13ರಂದು ವಿದುಷಿ ರೋಹಿಣಿ ಉದಯ್ ಶಿಷ್ಯೆಯರಾದ ಶ್ರದ್ಧಾ ಮತ್ತು ಶ್ರಮ್ಯ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ ಪುತ್ತೂರು ಪ್ರಸ್ತುತಿಯಲ್ಲಿ ನಡೆಯಲಿದೆ.
ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ದೀಪಪ್ರಜ್ವಲನ ಮಾಡುವರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕರಾದ ಭಾರತಿ ಜಿ. ಭಟ್ ವಹಿಸುವರು. ಮುಖ್ಯ ಅತಿಥಿಗಲಾಗಿ ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ, ಮಂಗಳೂರು ಸನಾತನ ನಾಟ್ಯಾಲಯದ ನೃತ್ಯಗುರು ವಿದುಷಿ ಶಾರದಾಮಣಿ ಶೇಖರ್, ದಾಯ್ಜಿವರ್ಲ್ಡ್ ಟಿವಿ ವಾಹಿನಿ ಸಂಸ್ಥಾಪಕ ವಾಲ್ಟರ್ ನಂದಳಿಕೆ ಭಾಗವಹಿಸುವರು ಎಂದು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ರೋಹಿಣಿ ಉದಯ್ ಮತ್ತು ಕಲ್ಲಡ್ಕ ಸಹೋದರಿಯರ ಹೆತ್ತವರಾದ ರೂಪಕಲಾ ಮತ್ತು ಮೋಹನ ಕಲ್ಲಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
| ಸೆ.14ರಿಂದ 18ರವರೆಗೆ 23ನೇ ವರ್ಷದ ಅದ್ದೂರಿ ಕಾರ್ಯಕ್ರಮಗಳು (more…)