ಹಿಂದು ಸಂಘಟನೆಯೊಂದರ ಕಾರ್ಯಕರ್ತ ದಕ್ಷಣ್ ಮಿತ್ತಮಜಲು ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ಮೇಲ್ಕಾರ್ ಸಮೀಪ ಕಾರಾಜೆ ಎಂಬಲ್ಲಿ ನಡೆದಿದೆ. ಈ ಘಟನೆ ಕುರಿತು ಬಂಟ್ವಾಳ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಗಳ ಶೋಧ ನಡೆದಿದೆ.
ಮೇಲ್ಕಾರ್ ಸಮೀಪ ಬೈಕಿನಲ್ಲಿ ಹೋಗುತ್ತಿದ್ದ ಸಂದರ್ಭ ಸುಮಾರು ಏಳು ಜನರಿದ್ದ ತಂಡ ಬೆನ್ನಿನ ಮೇಲೆ ರಾಡ್ ಮತ್ತು ಚೂರಿಯಿಂದ ಇರಿದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಗಾಯಗೊಂಡ ದಕ್ಷಣ್ ನನ್ನು ಕೂಡಲೇ ಬಂಟ್ವಾಳದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಶಾಸಕ ರಾಜೇಶ್ ನಾಯ್ಕ್, ಮಡಿಕೇರಿಗೆ ತೆರಳಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಆಸ್ಪತ್ರೆಗೆ ತೆರಳಿ ಗಾಯಾಳುವನ್ನು ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಂಟ್ವಾಳ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮಾಹಿತಿಗಳನ್ನು ಪಡೆದುಕೊಂಡರು.
Be the first to comment on "ಮೇಲ್ಕಾರ್ ಸಮೀಪ ಕಾರಾಜೆಯಲ್ಲಿ ಯುವಕನ ಮೇಲೆ ಹಲ್ಲೆ: ಪೊಲಿಸರಿಂದ ತನಿಖೆ"