ನೇತ್ರಾವತಿ ನದಿಯಲ್ಲಿ ಭಾರಿ ಪ್ರವಾಹದಿಂದ ಬಿ.ಸಿ.ರೋಡ್ ತಲಪಾಡಿಯ 110 ಕೆವಿ ವಿದ್ಯುತ್ ಸಬ್ ಸ್ಟೇಶನ್ ನ ಹಿಂದೆ ಇರುವ ಎರಡು ವಿದ್ಯುತ್ ಗೋಪುರ, 8 ಕಂಬಗಳು ಕುಸಿದಿದ್ದು 50 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜಾಹೀರಾತು
ಸಜೀಪಮುನ್ನೂರು, ಸಜೀಪಮೂಡ, ಸಜೀಪನಡು, ಚೇಳೂರು, ಅಮ್ಟೂರು, ಗೋಳ್ತಮಜಲು, ಬಾಳ್ತಿಲ, ಬೋಳಂತೂರು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗೋಪುರವು ನೇತ್ರಾವತಿ ನದಿಯಲ್ಲಿ ಪ್ರವಾಹ ಬಂದ ಕಾರಣ ಕುಸಿದಿದೆ. ಈ ಗ್ರಾಮಗಳಿಗೆ ಸುತ್ತುಬಳಸಿ ಪರ್ಯಾಯ ವಿದ್ಯುತ್ ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗಿದ್ದು ಹೊಸ ಗೋಪುರ ಅಳವಡಿಕೆವರೆಗೆ ಗ್ರಾಹಕರು ಸಹಕರಿಸಬೇಕು ಎಂದು ಎಇಇ ನಾರಾಯಣ ಭಟ್ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ನದಿ ಪ್ರವಾಹ: ವಿದ್ಯುತ್ ಗೋಪುರಗಳಿಗೆ ಹಾನಿ, ಕುಸಿದ ಕಂಬಗಳು, ಅಂದಾಜು 50 ಲಕ್ಷ ರೂ ನಷ್ಟ"
Be the first to comment on "ನದಿ ಪ್ರವಾಹ: ವಿದ್ಯುತ್ ಗೋಪುರಗಳಿಗೆ ಹಾನಿ, ಕುಸಿದ ಕಂಬಗಳು, ಅಂದಾಜು 50 ಲಕ್ಷ ರೂ ನಷ್ಟ"