ಮುನಿ ಪರಂಪರೆಯಿಂದ ಹಾಗೂ ಅಹಿಂಸಾ ಪರಿಪಾಲನೆ ಯಿಂದ ಜೈನಧರ್ಮ ವಿಶ್ವದಲ್ಲಿಯೇ ಗುರುತಿಸುವಂತಾಗಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅಭಿಪ್ರಾಯಪಟ್ಟರು.
ಬಂಟ್ವಾಳ ಜೈನ್ ಮಿಲನ್ ಆಶ್ರಯದಲ್ಲಿ ಬಿ.ಸಿ.ರೋಡಿನ ಉದ್ಯಾನವನದ ಬಳಿಯ ಕಲಾಮಂದಿರದಲ್ಲಿ ನಡೆದ ಆಟಿ ತಿಂಗಳ ಆಹಾರಮೇಳ ಹಾಗೂ ಆಟಿ ಸಮ್ಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅತಿಥಿಯಾಗಿದ್ದ ಭಾರತೀಯ ಜೈನ್ ಮಿಲನ್ ವಲಯ-8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಅವರು ಮಾತನಾಡಿ, ಕರಾವಳಿ ಭಾಗದ ಮಿಲನ್ ಘಟಕಗಳು ಆಟಿದ ತಮ್ಮನದಂತಹ ಕಾರ್ಯಕ್ರಮದ ಮೂಲಕ ವಲಯಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು.ಮಿಲನ್ ಅಧ್ಯಕ್ಷ ಬ್ರಜೇಶ್ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವಲಯ 8 ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ನಿರ್ದೇಶಕ ಸುದರ್ಶನ್ ಜೈನ್ ಅತಿಥಿಯಾಗಿದ್ದರು.ವಲಯ ನಿರ್ದೇಶಕ ಸೋಮಶೇಖರ ಶೆಟ್ಟಿ ಉಪನ್ಯಾಸ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಮಿಲನೋತ್ತಮ ಪುರಸ್ಕಾರವನ್ನು ಪೆರಿಯಾರುದೋಟ ದಿವಾಕರ್ ಜೈನ್, ಪಾಕಶಾಸ್ತ್ರ ಪ್ರವೀಣ ಪ್ರಶಸ್ತಿಯನ್ನು ಆಲಂಪುರಿ ನಮಿರಾಜ್ ಜೈನ್ ರವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಯೋಜಿಸಲಾದ ಆಹಾರಮೇಳವನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಪಚ್ಚಾಜೆಗುತ್ತು ಜಿನರಾಜಾರಿಗ,ಮುನಿರಾಜ ರೆಂಜಳ ರವರು ಉಪಸ್ಥಿತರಿದ್ದರು ಕಾರ್ಯದರ್ಶಿ ಗೀತಾ ಜಿನಚಂದ್ರ ವರದಿ ವಾಚಿಸಿದರು.ಉಪಾಧ್ಯಕ್ಷ ಡಾ.ಸುದೀಪ್ ಸಿದ್ದಕಟ್ಟೆ ಸ್ವಾಗತಿಸಿದರುಕೋಶಾಧಿಕಾರಿ ಚಂದ್ರಕಾಮತ ವಂದಿಸಿದರು.ಮಿಲನ್ ಪೂರ್ವಾಧ್ಯಕ್ಷ ಆದಿರಾಜ್ ಜೈನ್,ಪೂರ್ವ ಕಾರ್ಯದರ್ಶಿ ಶಿವಪ್ರಕಾಶ್ ನಿರೂಪಿಸಿದರು. ಸ್ವಪ್ನಾ ಚಂದ್ರಪ್ರಭ,ಸನ್ಮತಿ.ಜಿ.ಇಂದ್ರ,ಜಿನೇಂದ್ರ ಜೈನ್,ಮನ್ಮಥರಾಜ್ ಜೈನ್,ಜಿತೇಶ್ ಜೈನ್ ಸಹಕರಿಸಿದರು.
Be the first to comment on "ಅಹಿಂಸಾ ಪರಿಪಾಲನೆಯಿಂದ ಜೈನಧರ್ಮಕ್ಕೆ ವಿಶ್ವಮಾನ್ಯತೆ: ಶಾಸಕ ರಾಜೇಶ್ ನಾಯ್ಕ್"